ಅವಿರತ ಪ್ರತಿಷ್ಠಾನದ ಮೂಲಕ ಸುಳ್ಯ ತಾ. ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ| ಶಾಲಿನಿ ವಿ.ಎಲ್. ರವರ ನೇತೃತ್ವದಲ್ಲಿ 365 ವಿದ್ಯಾರ್ಥಿಗಳಿಗೆ ನೋಟು ಬುಕ್ ವಿತರಣಾ ಕಾರ್ಯಕ್ರಮ

0

ಅವಿರತ ಪ್ರತಿಷ್ಠಾನದ ಮೂಲಕ ಸುಳ್ಯ ತಾಲೂಕು ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ|ಶಾಲಿನಿ ವಿ.ಎಲ್. ಅವರ ನೇತೃತ್ವದಲ್ಲಿ ಒಟ್ಟು 14 ಸರ್ಕಾರಿ ಶಾಲೆಗಳ 365 ವಿದ್ಯಾರ್ಥಿಗಳಿಗೆ ನೋಟು ಬುಕ್ ವಿತರಣಾ ಕಾರ್ಯಕ್ರಮ ಜೂ.22ರಂದು ನಡೆಯಿತು.

ಕ್ಯಾತನಕೆರೆ, ಹರುಬಿಹಳ್ಳಿ, ದೇವಿಹಳ್ಳಿ, ದೇವಿಹಳ್ಳಿ ಬೋವಿ ಕಾಲೋನಿ, ಬಸವರಾಜಪುರ, ಬಸವರಾಜಪುರ ಕಾಲೋನಿ, ದೋರನಹಳ್ಳಿ, ಶಿವಪುರ ಕಾವಲು , ಬಸ್ತಿಹಳ್ಳಿ, ಅಮ್ಮನ ಬ್ಯಾಡರಹಳ್ಳಿ, ವೀರದೇವನಹಳ್ಳಿ, ರಾಜಗೆರೆ, ವೈಜಕೂರು, ಬೆಳ್ಳಹಳ್ಳಿ ಈ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ನೀಡಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೋತ್ಸಾಹಿಸಲಾಯಿತು. ಸಿ.ಲಕ್ಷ್ಮಪ್ಪ ಮತ್ತು ಪುನೀತ್ ನೇತೃತ್ವ ವಹಿಸಿದ್ದರು. ಡಾ.ಶಾಲಿನಿ ಕುಟುಂಬಸ್ಥರು, ಶಾಲಾ ಸಿಬ್ಬಂದಿ, ಎಸ್.ಡಿ.ಎಂ.ಸಿ ಸದಸ್ಯರು ಹಾಜರಿದ್ದರು.