ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮರದ ಅಪಾಯಕಾರಿ ಗೆಲ್ಲುಗಳನ್ನು ತೆರವುಗೊಳಿಸಿದ ಇಲಾಖೆ

0

ಸುಳ್ಯ ಟೂರಿಸ್ಟ್ ವ್ಯಾನ್ ಮತ್ತು ಕಾರು ಚಾಲಕ ಮಾಲಕ ಸಂಘದ ಮನವಿಗೆ ಸ್ಪಂದನೆ

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಇರುವ ಬೃಹತ್ ಮರದ ಅಪಾಯಕಾರಿ ರೆಂಬೆಗಳನ್ನು ತೆರವುಗೊಳಿಸುವಂತೆ ಸುಳ್ಯ ತಾಲೂಕು ಟ್ಯಾಕ್ಸಿ ವ್ಯಾನ್ ಮತ್ತು ಕಾರು ಚಾಲಕ ಮಾಲಕ ಸಂಘದಿಂದ ಸುಳ್ಯ ತಹಶೀಲ್ದಾರ್ ಮಂಜುಳಾರವರಿಗೆ ಜೂನ್ ೩೧ರಂದು ಮನವಿಯನ್ನು ನೀಡಿದ್ದರು.
ಆ ಬಳಿಕ ಮರದ ಒಂದು ಗೆಲ್ಲು ಕೆಳಭಾಗದಲ್ಲಿ ನಿಂತಿದ್ದ ಟೂರಿಸ್ಟ್ ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡಿತ್ತು.

ಇದೀಗ ಇಲಾಖೆಯವರು ಮರದ ಅಪಾಯಕಾರಿ ಸ್ಥಿತಿಯನ್ನು ಗಮನಿಸಿ ಜು ೯ ರಂದು ಮರದ ಎಲ್ಲಾ ಗೆಲ್ಲುಗಳನ್ನು ತಿರುವುಗೊಳಿಸುವ ಕಾರ್ಯಾಚರಣೆಯನ್ನು ಮಾಡಿದ್ದಾರೆ.

ತೆರವು ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ, ನಗರ ಪಂಚಾಯತ್, ಮೆಸ್ಕಾಂ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಸುಳ್ಯ ಟೂರಿಸ್ಟ್ ಕಾರು ಮತ್ತು ಚಾಲಕ ಸಂಘದ ಪದಾಧಿಕಾರಿಗಳು ಸದಸ್ಯರುಗಳು ಸಹಕರಿಸಿದರು.