ಎಲ್ಲರಿಗೂ ಮಾದರಿ ವ್ಯಕ್ತಿ ಸರೋಜಿನಿಯವರು – ದಾಮೋದರ ಗೌಡ ಗೂನಡ್ಕ















ಒಂದೇ ಶಾಲೆಯಲ್ಲಿ 39 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಇವರ ಸೇವೆ ಅನನ್ಯವಾದದ್ದು. ಯಾವುದೇ ಕಷ್ಟದ ಸಂದರ್ಭದಲ್ಲಿ ಧೃತಿಕೆಡದೆ ಆಡಳಿತ ಮಂಡಳಿ, ಪೋಷಕರು, ವಿದ್ಯಾರ್ಥಿಗಳನ್ನು ಸರಿದೂಗಿಸೊಕೊಂಡು ಹೋಗುವುದು ಸುಲಭದ ಮಾತಲ್ಲ. ತಮ್ಮನ್ನೇ ನಂಬಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಇದಕ್ಕೆ ಯಾವತ್ತೂ ಚ್ಯುತಿ ಬಾರದ ರೀತಿಯಲ್ಲಿ ಸೇವೆ ಸಲ್ಲಿಸಿ ಮಾದರಿ ಶಿಕ್ಷಕಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ನಿವೃತ್ತ ಶಿಕ್ಷಕ ದಾಮೋದರ ಗೌಡ ಗೂನಡ್ಕ ಹೇಳಿದರು. ಅವರು ಜೂ. 28ರಂದು ನಿಧನರಾದ ನಿವೃತ್ತ ಮುಖ್ಯ ಶಿಕ್ಷಕ ದಿ. ಜತ್ತಪ್ಪ ಗೌಡರ ಪತ್ನಿ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸರೋಜಿನಿ ಕಲ್ಲುಗದ್ದೆಯವರಿಗೆ ಅರಂತೋಡಿನ ತೆಕ್ಕಿಲ್ ಸಭಾಭವನದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀಮತಿ ಸರೋಜಿನ ಕಲ್ಲುಗದ್ದೆಯವರ ಹಿರಿಯ ಪುತ್ರ ಹಿರಿಯ ಪುತ್ರ ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಜಯಪ್ರಕಾಶ್ ಕಲ್ಲುಗದ್ದೆ ಸ್ವಾಗತಿಸಿ, ಕುಟುಂಬದ ಪರಿಚಯ ಹೇಳಿದರು. ಮೃತರ ಪುತ್ರರಾದ ಹರಿಪ್ರಸಾದ್ ಕಲ್ಲುಗದ್ದೆ, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ದಿವಾಕರ ಕಲ್ಲುಗದ್ದೆ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ತಾರಾನಾಥ ಕಲ್ಲುಗದ್ದೆ, ಪುತ್ರಿ ಶ್ರೀಮತಿ ಮಮತಾ ಆನಂದ ಅರಂತೋಡು ಸೇರಿದಂತೆ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.







