ಅಟೋ ನಿಲ್ದಾಣದಲ್ಲಿಯೇ ಹುಟ್ಟು ಹಬ್ಬ ಆಚರಿಸಿಕೊಂಡ ಅಟೋ ಚಾಲಕ ರಾಧಾಕೃಷ್ಣ ಪರಿವಾರಕಾನ

0

ಸುಳ್ಯ ಗಾಂಧಿನಗರ
ಮಹಾತ್ಮಗಾಂಧಿ ಅಟೋ ಚಾಲಕ ಮಾಲಕರಿಂದ ಆಯೋಜನೆ

ಸುಳ್ಯ ಗಾಂಧಿನಗರದ ಮಹಾತ್ಮಗಾಂಧಿ ಅಟೋ ನಿಲ್ದಾಣದಲ್ಲಿ ಕಳೆದ 20 ವರ್ಷಗಳಿಂದ ಅಟೋ ಚಾಲಕರಾಗಿ ದುಡಿಯುತ್ತಿರುವ ಹಿರಿಯ ಅಟೋ ಚಾಲಕ ರಾಧಾಕೃಷ್ಣ ಪರಿವಾರಕಾನ ರವರ 55 ನೇ ವರ್ಷದ ಹುಟ್ಟು ಹಬ್ಬವನ್ನು ಜು.17 ರಂದು ಅಟೋ ನಿಲ್ದಾಣದಲ್ಲಿಯೇ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಹಿರಿಯ ಅಟೋ ಚಾಲಕರಾಗಿರುವ ಇವರು ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯರಾಗಿ, ಅಧ್ಯಕ್ಷರಾಗಿ, ಕೆ.ಡಿ.ಪಿ.ಸದಸ್ಯರಾಗಿ
ಸೇವೆ ಸಲ್ಲಿಸಿದ್ದು ರಾಜಕೀಯ ಮಾತ್ರವಲ್ಲದೆ ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುವ ಮೂಲಕ ಓರ್ವ ಸಮಾಜ ಸೇವಕರೆಂದೆನಿಸಿಕೊಂಡಿರುತ್ತಾರೆ. ಅಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುವ ರಾಧಾಕೃಷ್ಣ ರವರು ಎಲ್ಲರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಇವರನ್ನು ಅಟೋ ಚಾಲಕರೆಲ್ಲರೂ ಸೇರಿ ಅಟೋ ನಿಲ್ದಾಣದಲ್ಲಿಯೇ ಕೇಕ್ ಕತ್ತರಿಸಿ, ಸಿಹಿ ತಿನಿಸುವ ಮೂಲಕ ಜನುಮ ದಿನವನ್ನು ಆಚರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಲ್ಲಾ ಅಟೋ ಚಾಲಕರು ಮತ್ತು ‌ಮಾಲಕರು ಭಾಗವಹಿಸಿದ್ದರು.