ಪೆರಾಜೆ : ನಿಲ್ಲಿಸಿದ ಕಾರಿಗೆ ಟೆಂಪೊ ಡಿಕ್ಕಿ , ವಾಹನ ಜಖಂ

0

ಪೆರಾಜೆಯ ಮುಖ್ಯ ರಸ್ತೆಯ ಬಳಿ ನಿಲ್ಲಿಸಿದ ಆಲ್ಟೋ ಕಾರಿಗೆ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ಗುದ್ದಿದ ಪರಿಣಾಮವಾಗಿ ವಾಹನಗಳು ಜಖಂಗೊಂಡ ಘಟನೆ ಜು.28 ರಂದು ನಡೆದಿದೆ.

ಸುಳ್ಯದಿಂದ ಮಡಿಕೇರಿ ಕಡೆಯತ್ತ ನಿಲ್ಲಿಸಿದ್ದ ಪೆರಾಜೆ ನಿವಾಸಿ ಬಂಗಾರಕೋಡಿ ವಿನಯ ಎಂಬವರು ತನ್ನ ಆಲ್ಟೋ ಕಾರನ್ನು ಪೆರಾಜೆಯ ಗ್ರಾಮ ವನ್ ಬಳಿಯ ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾರಿನಿಂದ ಇಳಿದು ಊಟಕ್ಕೆಂದು ಹೋಟೆಲ್ ಗೆ ತೆರಳುತ್ತಿದ್ದ ವೇಳೆ ಸಂಪಾಜೆ ಕಡೆಯಿಂದ ವೇಗವಾಗಿ ಬಂದ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ಚಾಲಕನ ನಿಯಂತ್ರಕ್ಕೆ ಬಾರದೆ ಮುಂಭಾಗದಲ್ಲಿರುವ ಆಲ್ಟೋ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ . ಪರಿಣಾಮವಾಗಿ ಸಂಪಾಜೆ ಕಡೆಗೆ ನಿಲ್ಲಿಸಿದ ಕಾರು ಹಾಗೂ ಸಂಪಾಜೆ ಕಡೆಯಿಂದ ಬಂದ ದೋಸ್ತ್ ವಾಹನ ಅಡ್ಡವಾಗಿ ಹೋಟೆಲ್ ಮುಂಭಾಗಕ್ಕೆ ತಿರುಗಿ ನಿಂತಿದೆ. ಗಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಹಾಗೂ ಟೆಂಪೋ ವಾಹನದ ಚಕ್ರಗಳು ಪಂಕ್ಚರ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ವಾಹನಗಳೆರಡೂ ಕೂಡ ಘಟನೆಯಲ್ಲಿ ಸಂಪೂರ್ಣ ಜಖಂ ಗೊಂಡಿದೆ.