ಜುಲೈ 15ರಂದು ನಿಧನರಾದ ಲಿಗೋಧರ ಆಚಾರ್ಯ ಅವರ ಶ್ರದ್ದಾಂಜಲಿ ಸಭೆಯು ಜುಲೈ 28ರಂದು ಶಿವಕೃಪ ಕಲಾ ಮಂದಿರದಲ್ಲಿ ನಡೆಯಿತು.














ಮೃತರ ಬಗ್ಗೆ ರಾಜ್ಯ ಟೈಲರಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಸುಳ್ಯ ನಗರ ಟೈಲರಿಂಗ್ ಅಸೋಸಿಯೇಷನ್ ಅಧ್ಯಕ್ಷ ಕುಸುಮಾಧರ ರೈ ಬೂಡು, ಕೆ. ಎಲ್ ಅಭಿಷೇಕ್, ಪುರೋಹಿತ ಭವಿಷ್ಯತ್ ಮತ್ತು ಕೇಶವ ಪುರೋಹಿತ್ ಕಡಬ ಮೃತರ ಬಗ್ಗೆ ನುಡಿನಮನ ಗೈದರು.

ಈ ಸಂಧರ್ಭದಲ್ಲಿ ಆದರ್ಶ ಆಯಿಲ್ ಮಿಲ್ಲಿನ ಮಾಲಕ ಕೇಶವ, ಮೃತರ ಪತ್ನಿ ಜಯಂತಿ. ಕೆ, ಪುತ್ರ ಕೆ. ಎಲ್. ಅಭಿಷೇಕ್ ಆಚಾರ್ಯ, ಶ್ರೀಮತಿ ಅರ್ಚನಾ. ಕೆ. ಎಲ್, ಸಂತೋಷ್ ಆಚಾರ್ಯ ಕುಟುಂಬಸ್ಥರು ಮತ್ತು ಬಂಧು -ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪಪಾರ್ಚನೆ ಗೈದರು.








