ನೂತನ ಯಾದವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ರಚನೆ

ಆಲೆಟ್ಟಿ ಯಾದವ ಸಭಾ ಪ್ರಾದೇಶಿಕ ಸಮಿತಿಯ ವಾರ್ಷಿಕ ಮಹಾಸಭೆಯ ಸಮಿತಿಯ ಅಧ್ಯಕ್ಷ ಸೀತಾರಾಮ ಕಣಕ್ಕೂರು ರವರ ಅಧ್ಯಕ್ಷತೆಯಲ್ಲಿ ಜು.26 ರಂದು ಶ್ರೀ ಸದಾಶಿವ ಸಭಾಭವನ ಆಲೆಟ್ಟಿಯಲ್ಲಿ ನಡೆಯಿತು.














ತಾಲೂಕು ಸಮಿತಿ ಪೂರ್ವಾಧ್ಯಕ್ಷ ಕೊರಗಪ್ಪ ಮಾಸ್ತರ್ ಕಣಕ್ಕೂರು ದೀಪ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ
ಪ್ರಗತಿಪರ ಕೃಷಿಕ ರಾಮಮಣಿಯಾಣಿ ಗೂಡಿಂಜ ರವರನ್ನು ಸನ್ಮಾನಿಸಲಾಯಿತು.
ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದವ್ಯವಸ್ಥಾಪನಾ ಸಮಿತಿಯ ಸದಸ್ಯರಾದವಿಜಯಕುಮಾರ್ ಆಲೆಟ್ಟಿ,ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ(614) ಅಂಕಗಳನ್ನು ಪಡೆದ
ಕು. ಸ್ನೇಹ ಕಣಕ್ಕೂರು, ಹಿಪ್ ಹಾಪ್ ಡ್ಯಾನ್ಸ್ ನಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ
ಕು. ಇಂಚರ ಆಲೆಟ್ಟಿ ಯವರನ್ನು ಅಭಿನಂದಿಸಲಾಯಿತು.
ದಿ .ಕಣಕ್ಕೂರು ಚೊಯಿಚ್ಚಿ ಅಮ್ಮ ಮತ್ತು ಕುಂಞಕಣ್ಣ ಮಣಿಯಾಣಿ ಯವರ ದತ್ತು ನಿಧಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ನೂತನ ಯಾದವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ರಚಿಸಲಾಯಿತು.
ಯುವ ವೇದಿಕೆಯ
ಅಧ್ಯಕ್ಷರಾಗಿ ದಿನೇಶ್ ಆಲೆಟ್ಟಿ, ಕಾರ್ಯದರ್ಶಿ ದಿನೇಶ್ ಕಣಕ್ಕೂರು, ಖಜಾಂಜಿ ಪ್ರವೀಣ್ ಆಲೆಟ್ಟಿ, ಉಪಾಧ್ಯಕ್ಷ ಅಶ್ವಥ್ ಎ.ಎಸ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಮಹಿಳಾ ವೇದಿಕೆಯ
ಅಧ್ಯಕ್ಷೆಯಾಗಿ ಶ್ರೀಮತಿ ಸವಿತಾರಾಜೇಶ್ ಆಲೆಟ್ಟಿ, ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ರಾಮಚಂದ್ರ ಆಲೆಟ್ಟಿ, ಖಜಾಂಜಿ ಶ್ರೀಮತಿ ಶೀಲಾವತಿ ಕಣಕ್ಕೂರು ರವರನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅತಿಥಿಗಳಾಗಿ ಕೇಂದ್ರ ಸಲಹಾ ಮಂಡಳಿ ಅಧ್ಯಕ್ಷ ಸುಧಾಮಆಲೆಟ್ಟಿ,
ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಗೌರವಾಧ್ಯಕ್ಷ ರಾಮಚಂದ್ರ ಆಲೆಟ್ಟಿ, ತಾಲೂಕು ಉಸ್ತುವಾರಿ ಸದಸ್ಯರಾದ ಶ್ರೀಮತಿ ಜಯಕೃಷ್ಣ ಬೆಟ್ಟ,
ಶ್ರೀಮತಿ ಸಾವಿತ್ರಿ ರಾಮ್ ಮಂಡೆಕೋಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶರಣ್ ಆರಂಬೂರು ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜೇಶ್ ಆಲೆಟ್ಟಿ ಸ್ವಾಗತಿಸಿದರು.ಕು. ಸಿಂಚನ ಆಲೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ಸುಂದರ ಆಲೆಟ್ಟಿ ಲೆಕ್ಕಪತ್ರ ಮಂಡಿಸಿದರು. ಪ್ರಣಿತ್ ಕಣಕ್ಕೂರು ವಂದಿಸಿದರು. ಪ್ರವೀಣ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







