













80 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಬ್ಲಾಕ್ ವತಿಯಿಂದ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್ ಡಿ ಪಿ ಐ ಬೆಳ್ಳಾರೆ ಬ್ಲಾಕ್ ಅದ್ಯಕ್ಷ ಹಮೀದ್ ಮರಕ್ಕಡ ಧ್ವಜಾರೋಹಣ ನೆರವೇರಿಸಿದರು.
ಶರೀಫ್ ನಿಂತಿಕಲ್ ಸಂದೇಶ ಭಾಷಣ ಮಾಡಿ ದೇಶಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ನೆನಪಿಸುತ್ತಾ ಈಗಿನ ಆಡಳಿತ ನಡೆಸುವ ರಾಜಕೀಯ ಪಕ್ಷಗಳು ಸಂವಿಧಾನ ವಿರುದ್ಧವಾಗಿ ಆಡಳಿತ ನಡೆಸುತ್ತ ದೌರ್ಜನ್ಯ ಅನ್ಯಾಯ ಮೂಲಕ ಭಾರತೀಯರನ್ನು ದಮನಿಸುತ್ತಿದೆ ಇದರಿಂದ ಎಲ್ಲಾ ಭಾರತಿಯರಿಗೂ ಸ್ವಾತಂತ್ರ್ಯ ಸಿಗಬೇಕಾಗಿದೆ. ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆಯಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸುಳ್ಯ ಅಸೆಂಬ್ಲಿ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ತಂಬಿನಮಕ್ಕಿ , ಬೆಳ್ಳಾರೆ ಬ್ಲಾಕ್ ಸದಸ್ಯರು ಪಕ್ಷದ ಕಾರ್ಯಕರ್ತರು ಹಾಗು ಅಭಿಮಾನಿಗಳು ಭಾಗವಹಿಸಿದರು. ಬಶೀರ್ ಸಮಹಾದಿ ಸ್ವಾಗತಿಸಿ, ವಂದಿಸಿದರು.







