ಇಂಟಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಸುಳ್ಯದ ವತಿಯಿಂದ 80 ನೇ ಸ್ವಾತಂತ್ರ್ಯೋತ್ಸವ

0

ಇಂಟಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಸುಳ್ಯ ಇದರ ವತಿಯಿಂದ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಬಳಿಯ ರಿಕ್ಷಾ ತಂಗುದಾಣದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಇಂಟಕ್ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಯೋಧ ಕೃಷ್ಣಪ್ಪ ಗೌಡ ಪಾಲ್ತಾಡು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಹಿರಿಯರಾದ ಬಾಪೂ ಸಾಹೇಬ್ ಅರಂಬೂರು ಶುಭ ಹಾರೈಸಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ರಾಜು ಪಂಡಿತ್, ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಇಂಟಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಸ್ಥಾಪಕಾಧ್ಯಕ್ಷ ಹರಿಶ್ಚಂದ್ರ ಪಂಡಿತ್, ಶ್ರೀಮತಿ ಆರತಿ ಪುರುಷೋತ್ತಮ ಮತ್ತು ಇಂಟಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಸದಸ್ಯರುಗಳಾದ ದಯಾನಂದ ಬಳ್ಳಡ್ಕ, ಐತಪ್ಪ ನಾಯ್ಕ, ಕರುಣಾಕರ ದೋಳ, ಮಹಮ್ಮದ್ ಕೇರ್ಪಳ, ರವಿಚಂದ್ರ ಕನಕಮಜಲು, ಲತೀಶ್ ಕಲ್ಲುಗುಂಡಿ, ಹರಿಶ್ಚಂದ್ರ ಬಂಗಾರಕೋಡಿ, ವಸಂತ ಕಾರ್ಗಿಲ್, ಜಯಪ್ರಕಾಶ್, ಇಬ್ರಾಹಿಂ ಜಿಗ್ಗ, ಅಬೂಬಕ್ಕರ್ ಅಜ್ಜಾವರ, ಬಾಲಕೃಷ್ಣ ಅಡ್ಕಾರು, ಗೋಪಾಲ ಕುರುಂಜಿಗುಡ್ಡೆ, ಯಶವಂತ ನಡುಬೆಟ್ಟು, ಇರ್ಫಾನ್ ಸುಳ್ಯ ಪ್ರಶಾಂತ್ ಆಚಾರಿ, ರಜಾಕ್ ಸುಳ್ಯ, ಬೋಜಪ್ಪ ನಾಯ್ಕ, ಧರ್ಮೇಶ್ ಕುತ್ತಿಮುಂಡ, ಭವಾನಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಇಂಟಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಉಪಾಧ್ಯಕ್ಷ ಚಂದ್ರಪ್ರಕಾಶ್ ಉರುಂಡೆ ಸಿಹಿತಿಂಡಿ ವಿತರಿಸಿದರು. ಇಂಟಕ್ ಸ್ನೇಹ ಸಂಗಮ ರಿಕ್ಷಾ ಯೂನಿಯನ್ ಸುಳ್ಯ ಇದರ ಅಧ್ಯಕ್ಷರಾದ ಪದ್ಮನಾಭ ಹರ್ಲಡ್ಕ ಧನ್ಯವಾದ ವಂದಿಸಿದರು.