













ಬದ್ರಿಯ ಜುಮ್ಮಾ ಮಸ್ಜಿದ್ ಹಾಗೂ ಖುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ ಇದರ ವತಿಯಿಂದ 80ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮವು ಮದ್ರಾಸ ವಠಾರದಲ್ಲಿ ಅಗಸ್ಟ್ 15ರಂದು ಶನಿವಾರ ನಡೆಯಿತು. ಬದ್ರಿಯ ಜುಮ್ಮಾ ಮಸ್ಜಿದ್ ಖತೀಬರಾದ ಮುನೀರ್ ಸಹದಿ ಅಲ್ ಅರ್ಷದಿಯವರು ಪ್ರಾರ್ಥನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.


ಖುವ್ವತ್ತುಲ್ ಇಸ್ಲಾಂ ಮದರಸದ ಸದರ್ ಮುಹಲ್ಲಿಮ್ರಾದ ಫೈಝಲ್ ಸಖಾಫಿಯವರು ಸ್ವಾಗತ ಭಾಷಣ ಮಾಡಿದರು. ಧ್ವಜಾರೋಹಣವನ್ನು ಜಮಾಹತ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಪಿ ಇವರು ನೆರವೇರಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷರಾದ ಮುಜೀಬ್ ಪೈಚಾರ್, ಜಮಾಹತ್ ಕಾರ್ಯದರ್ಶಿ ಅಬ್ದುಲ್ ರಹಮಾನ್ ಬೊಳುಬೈಲು, ಬದ್ರಿಯಾ ಜುಮಾ ಮಸೀದಿ ಪೈಚಾರ್ ಇದರ ಕೋಶಾಧಿಕಾರಿಳಾದ ಹನೀಫ್ ಬಿಎಚ್ , ಮುಹಲ್ಲಿಮ್ ಗಳಾದ ಹನೀಫ್ ಮದನಿ ಮಂಡೆಕೋಲು ಹಾಗೂ ಸಾಬೀತ್ ಫಾಳಿಲಿ, ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷರಾದ ಮುನೀರ್ ಪಿಕೆ. ಪೈಚಾರ್ ಅಧ್ಯಕ್ಷರಾದ ಸಹದ್ ಕೆಪಿ ಪೈಚಾರ್, ಬಿಜೆಎಮ್ ಇದರ ಎಲ್ಲಾ ಸದಸ್ಯರುಗಳು, ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಎಲ್ಲಾ ಸದಸ್ಯರುಗಳು ಹಾಗೂ ವಿದ್ಯಾರ್ಥಿಗಳ ಪೋಷಕರು, ಮದರಸ ವಿದ್ಯಾರ್ಥಿಗಳು, ಸ್ಥಳೀಯ ಜಮಾಹತ್ ನಿವಾಸಿಗಳು ಭಾಗವಹಿಸಿದ್ದರು. ಮದರಸ ಉಸ್ತುವಾರಿ ಮುಜೀಬ್ ಪೈಚಾರ್ ವಂದಿಸಿ , ಕಾರ್ಯಕ್ರಮವನ್ನು ನಿರೂಪಿಸಿದರು.







