














ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸ್ಥಳೀಯ ನಾಗತಿರ್ಥ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಮುಖ್ಯೋಪಾಧ್ಯಾಯರು , ಶಿಕ್ಷಕರು ಹಾಗೂ ಹೆತ್ತವರು ಮೆರವಣಿಗೆ ಮೂಲಕ ದೇಗುಲಕ್ಕೆ ಬಂದು ದೇವರ ಪ್ರಸಾದವನ್ನು , ಉಪಹಾರವನ್ನು ಸ್ವೀಕರಿಸಿ ತೆರಳಿದರು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರ್ ಎಲ್ಲರನ್ನೂ ಸ್ವಾಗತಿಸಿ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.







