ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಮರಾಟಿ ಸಮಾಜ ಸೇವಾ ಸಂಘ‌ ಸುಳ್ಯ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಗಿರಿದರ್ಶಿನಿ ಸಭಾಭವನದ ವಠಾರದಲ್ಲಿ ನಡೆಯಿತು.
ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ಗಿರಿಜಾ ಎಂ.ವಿ. ಮತ್ತು ಜತೆ ಕಾರ್ಯದರ್ಶಿ ಶ್ರೀಮತಿ ಪದ್ಮಾವತಿ ಶುಭ ಹಾರೈಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ರೇವತಿ ದೊಡ್ಡೇರಿ, ಸಂಘದ ಉಪಾಧ್ಯಕ್ಷೆ ಶ್ರೀಮತಿ ಸುಲೋಚನ, ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಗದೀಶ್ ಅರಂಬೂರು, ಜನಾರ್ದನ ನಾಯ್ಕ್ ಕೇರ್ಪಳ, ಭವಾನಿಶಂಕರ ಕಲ್ಮಡ್ಕ, ಶ್ರೀಮತಿ ಮೀನಾಕ್ಷಿ ಭಸ್ಮಡ್ಕ, ವಿಶ್ವನಾಥ ವಿನೋಬನಗರ, ದಿನೇಶ್ ಭಸ್ಮಡ್ಕ, ಪುನೀತ್ ಕಂದಡ್ಕ ಉಪಸ್ಥಿತರಿದ್ದರು.
ರಮೇಶ್ ನೀರಬಿದಿರೆ ಸ್ವಾಗತಿಸಿ, ವಂದಿಸಿದರು.