ಜಟ್ಟಿಪಳ್ಳ ಸಂಭ್ರಮದ ಮೀಲಾದ್ ಆಚರಣೆ ಮೀಮ್ ಸಾಂಸ್ಕೃತಿಕ ಸಂಭ್ರಮ

0

ಸುಳ್ಯದಲ್ಲಿ ಸಂಚರಿಸಿದ ಬೃಹತ್ ಮಿಲಾದ್ ಜಾಥ

ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಇದರ ವತಿಯಿಂದ ಪ್ರವಾದೀ ಮುಹಮ್ಮದ್ ಪೈಗಂಬರ್ ರವರ 1501ನೇ ಜನ್ಮದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಸ್ಥಳೀಯ ಮದ್ರಸದ ನೂರರಷ್ಟು ವಿದ್ಯಾರ್ಥಿಗಳು ಹಲವು ಭಾಷೆಗಳಲ್ಲಿ ವೈವಿಧ್ಯ ಮೀಲಾದ್ ಮೀಮ್ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.
ಸುಲ್ತಾನ್ ಮತ್ತು ಬುಸ್ತಾನ್ ಎಂಬೆರಡು ಟೀಂ ಗಳ ಮಧ್ಯೆ ಕುತೂಹಲ ಭರಿತ ಪೈಪೋಟಿಯೊಂದಿಗೆ ನಡೆದ ಸ್ಪರ್ಧೆಯಲ್ಲಿ ಸುಲ್ತಾನ್ ಪ್ರಥಮ ಸ್ಥಾನ ಪಡದು ಚಾಂಪಿಯನ್ ಟ್ರೋಫಿ ತನ್ನದಾಗಿಸಿ,ಸಮೀಪ ಸ್ಪರ್ಧಿ ಬುಸ್ತಾನ್ ರನ್ನರ್ ಟ್ರೋಫಿ ಪಡೆದುಕೊಂಡರು.
ಮಸೀದಿಯಲ್ಲಿ ನಡೆದ ಮೌಲಿದ್ ಹಾಗೂ ಪ್ರಾರ್ಥನ ಸಂಗಮಕ್ಕೆ ಅಸ್ಸೆಯ್ಯಿದ್ ಕುಂಞ್ಞಿಕೋಯ ತಂಙಳ್ ಸುಳ್ಯ ನೇತೃತ್ವ ವಹಿಸಿದರು.ಆ ಬಳಿಕದ ಮೀಲಾದ್ ಸಂಗಮದ ಅಧ್ಯಕ್ಷತೆಯನ್ನು ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಎನ್ ಎ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು ವಹಿಸಿದರು.
ಗಾಂಧಿನಗರ ಜಮಾಅತ್ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್,ಸೂಡಾ ಅಧ್ಯಕ್ಷ ಹಾಜಿ ಮುಸ್ತಫ ಕೆ ಎಂ ಸ್ಥಳೀಯ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮೀಲಾದ್ ಸಂದೇಶ ನೀಡಿದರು.

ಸಮಿತಿ ಅಧ್ಯಕ್ಷ ಎನ್ ಎ ಅಬ್ದುಲ್ಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಟ್ರೋಪಿ ಮತ್ತು ಬಹುಮಾನ ನೀಡದರು.

ಕಾರ್ಯಕ್ರಮದಲ್ಲಿ ಗಾಂಧಿನಗರ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಕೆ ಬಿ ಇಬ್ರಾಹಿಂ,ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ,ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಲತೀಫ್ ಹರ್ಲಡ್ಕ, ಜಟ್ಟಿಪಳ್ಳ ಕಮಿಟಿ ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ,ಮಾಜಿ ಅಧ್ಯಕ್ಷರುಗಳಾದ‌ ರಶೀದ್ ಜಟ್ಟಿಪಳ್ಳ, ಹಾಜಿ ಮಹಮ್ಮದ್ ಎ ಎಂ, ಕೆ ಎಂ ಮೂಸಾ,ವಿ ಕೆ ಅಬೂಬಕ್ಕರ್ ಹಾಜಿ,ಬಶೀರ್ ಕ್ವಾಲಿಟಿ,ಕಿಲೋರ್ ಕ್ವಾಲಿಟಿ, ಬಶೀರ್, ಬಾಳಮಕ್ಕಿ,ಯೂನುಸ್ ಸುಲ್ತಾನ್,ಬಶೀರ್ ಗೂನಡ್ಕ,ಸುಲೈಮಾನ್ ಬಾರಿಕ್ಕಾಡ್,ಅಮೀರ್ ಎಸ್ ಎ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂಧಂರ್ಭ ಮದ್ರಸದ ಅಧ್ಯಾಪಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪೈಸಲ್ ಜಟ್ಟಿಪಳ್ಳ ಸ್ವಾಗತಿಸಿ ಸಮಿತಿ ಉಪಾಧ್ಯಕ್ಷ ತಾಜುದ್ದೀನ್ ಎಂ ಎಸ್,ಕಾರ್ಯದರ್ಶಿ ಮೊಯ್ದಿನ್ ,ಶಿಹಾಬ್ ಸಿ ಎ ಎ,ಕಾರ್ಯಕ್ರಮ ನಿರೂಪಿಸಿದರು.
ನಾಸೀರ್ ಸಿ ಎ,ಶಿಹಾಬ್ ಷಾ,ಶಿಹಾಬ್ ಜೆ.ಎ,ಇಮ್ರಾನ್ ಅಮೈ,ಇಚೂ,ರಿಪಾಯಿ ವೆಜ್, ಸುಲೈಮಾನ್ ಡಿಸ್ಕೋ,ರಂಶಾದ್ ವಿ ಕೆ ರಜಾಕ್ ಕೊಡಿಯಾಲಬೈಲು, ನಿಜಾರ್ (ನಿಜ್ಜು) ನಿಸಾರ್,ಹಮೀದ್ ಬಿ ಕೆ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಜಟ್ಟಿಪಳ್ಳ ಜಮಾಯತರು ಹಾಗೂ ಊರ ಪರವೂರ ಹಿತೈಷಿಗಳು ಭಾಗವಹಿಸಿದರು.
.ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ವಂದಿಸಿದರು.

ಆಕರ್ಷಕ ಮಿಲಾದ್ ಜಾಥ ಹಾಗೂ ಜಾಥದದೂಕ್ಕೂ ಸಿಹಿತಿಂಡಿ ವಿತರಣೆ
ಪ್ರವಾದಿ ಸಂದೇಶದೊಂದಿಗೆ ಜಟ್ಟಿಪಳ್ಳ ಮಸೀದಿ ಬಳಿಯಿಂದ ಅರಂಭಗೊಂಡ ಮಿಲಾದ್ ಜಾಥವು ಸುಳ್ಯ ಶ್ರೀರಾಂಪೇಟೆ ಮೂಲಕ ಸಾಗಿ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯವರೆಗೆ ತೆರಳಿ ಗಾಂಧಿನಗರ ಮಸೀದಿ ಮುಂಬಾಗದ ಮೂಲಕ ನಾವೂರು ಅನ್ಸಾರಿಯಾ ಜಟ್ಟಿಪಳ್ಳ ರಸ್ತೆ ಮೂಲಕ ಸಾಗಿ ಬೊಳಿಯಮಜಲು ರಸ್ತೆ ಮೂಲಕ ಜಟ್ಟಿಪಳ್ಳ ಮಸೀದಿ ವರೆಗೆ ತೆರಳಿ ಸಮಾಪ್ತಿ ಗೊಂಡಿತು.
ಜಾಥದಲ್ಲಿ ಸಾರ್ವಜನಿಕರಿಗೆ ಸಿಹಿತಿಂಡಿ ವಿತರಿಸಲಾಯಿತು.
ಪುಟಾಣಿ ಮಕ್ಕಳಿಂದ ಧಪ್ ಪ್ರದರ್ಶನ ನೀಡಿದರು
ಜಾಥದಲ್ಲಿ ಅಲ್ಲಲಿ ವಿವಿಧ ಸಂಘ ಸಂಸ್ಥೆಗಳಿಂದ ಪಾನಿಯ ಮತ್ತು ತಿಂಡಿ ತಿನಿಸುಗಳನ್ನು ವಿತರಿಸಲಾಯಿತು.
ಜಾಥದಲ್ಲಿ ಹಯಾತುಲ್ ಇಸ್ಲಾಂ ಕಮಿಟಿ ಸದಸ್ಯರು ಜಟ್ಟಿಪಳ್ಳ ಮಹಲ್ ನಿವಾಸಿಗಳು,ಉಸ್ತಾದರು ಭಾಗವಹಿಸಿದರು.