













ಬಳ್ಪ: ಕಸ್ತೂರಿ ರಂಗನ್ ವರದಿಯಲ್ಲಿ ಬಾಧಿತ ಬಳ್ಪ ಗ್ರಾಮದಲ್ಲಿ ವಿಶೇಷ ಗ್ರಾಮ ಸಭೆ ಕರೆಯುವಂತೆ ಗ್ರಾಮಸ್ಥರು ಗ್ರಾಮ ಪಂಚಾಯತ್ ಗೆ ಮನವಿ ನೀಡಿದ ಘಟನೆ ಆ. 27ರಂದು ನಡೆದಿದೆ.
ಕಸ್ತೂರಿ ರಂಗನ್ ವರದಿಯಲ್ಲಿ ಬಳ್ಪ ಗ್ರಾಮವು ಸೇರ್ಪಡೆಯಾಗಿರುವುದರಿಂದ ಬಳ್ಪ ಗ್ರಾಮವು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ ಪರಿಣಾಮ ಮುಂದೆ ಆಗುವ ಪರಿಣಾಮಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ ನಿರ್ಣಯಕೈಗೊಳ್ಳುವ ಉದ್ದೇಶದಿಂದ ಸಭೆಯನ್ನು ಕರೆಯಲಾಗಿದೆ.
ಈ ಸಂದರ್ಭದಲ್ಲಿ ಪಂಜ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಹರ್ಷಿತ್ ಕಾರ್ಜ, ಶ್ರೀಮತಿ ಶಶಿಕಲಾ ಸೂಂತಾರು, ಮಾಜಿ ಸದಸ್ಯ ಪುಟ್ಟಣ್ಣ ಗೌಡ ಕುಳ, ಮಾಜಿ ಸದಸ್ಯ ಹಾಗೂ ಮಲೆನಾಡು ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ರಮಾನಂದ ಎಣ್ಣೆಮಜಲು, ಬಳ್ಪ ಗ್ರಾಮ ಸಂಚಾಲಕ ಹೊನ್ನಪ್ಪ ಎಂರ್ಬಿಲ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಅಚ್ಯುತ ಆಲ್ಕಬೆ, ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಪಂಜ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರುಗಳಾದ ಸದಾನಂದ ಕಾರ್ಜ ಮತ್ತು ಅರುಣ್ ರೈ ಗೆಜ್ಜೆ, ಬಿಜೆಪಿ ಬಳ್ಪ ಶಕ್ತಿಕೇಂದ್ರದ ಅಧ್ಯಕ್ಷ ಹರೀಶ್ ಕಾರ್ಜ, ಶ್ರೀಮತಿ ಸಾವಿತ್ರಿ ಕುಳ ಮತ್ತಿತರರು ಉಪಸ್ಥಿತರಿದ್ದರು.







