ದೇವರಕೊಲ್ಲಿ ಬಳಿ ಟೆಂಪೋ ಟ್ರಾವೆಲ್ ಮೇಲೆ ಉರುಳಿ ಬಿದ್ದ ಲಾರಿ

0

ಮೂವರಿಗೆ ಗಂಭೀರ ಗಾಯ – ಸುಳ್ಯ ಆಸ್ಪತ್ರೆಗೆ ರವಾನೆ

ದೇವರ ಕೊಲ್ಲಿ ಸಮೀಪ ಹಬ್ಬಿಕೊಲ್ಲಿ ತಿರುವು ಬಳಿ ಲಾರಿಯೊಂದು ಟೆಂಪೋ ಟ್ರಾವೆಲರ್ ಮೇಲೆ ಮಗುಚಿ ಬಿದ್ದ ಘಟನೆ ಆಗಸ್ಟ್ 26ರಂದು ಸಂಜೆ ನಡೆದಿದೆ.

ಘಟನೆಯಿಂದ ಮೂವರಿಗೆ ಗಂಭೀರ ಗಾಯವಾಗಿರುವ ವರದಿ ತಿಳಿದು ಬಂದಿದ್ದು
ಗಾಯಾಳುಗಳನ್ನು ಆಂಬುಲೆನ್ಸ್ ವಾಹನಗಳ ಮೂಲಕ ಸುಳ್ಯದ ಆಸ್ಪತ್ರೆಗೆ ರವಾನಿಸಲಾಗಿದೆ.ಸುಳ್ಯ ಆಂಬುಲೆನ್ಸ್ ಚಾಲಕಮಾಲಕ ಸಂಘದ ಸದಸ್ಯರು ಹಾಗೂ ಸ್ಥಳೀಯರು ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.