ಮೂವರಿಗೆ ಗಂಭೀರ ಗಾಯ – ಸುಳ್ಯ ಆಸ್ಪತ್ರೆಗೆ ರವಾನೆ















ದೇವರ ಕೊಲ್ಲಿ ಸಮೀಪ ಅಬ್ಬಿಕೊಲ್ಲಿ ತಿರುವು ಬಳಿ ಲಾರಿಯೊಂದು ಟೆಂಪೋ ಟ್ರಾವೆಲರ್ ಮೇಲೆ ಮಗುಚಿ ಬಿದ್ದ ಪರಿಣಾಮವಾಗಿ ಪ್ರಯಾಣಿಕರಿಗೆ ಗಾಯವಾದ ಘಟನೆ ಆಗಸ್ಟ್ 26ರಂದು ಸಂಜೆ ನಡೆದಿದೆ.

ಗುಜರಾತಿನ ಅಹಮದಾಬಾದ್ ನಿವಾಸಿಗಳು ಮಡಿಕೇರಿಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದು, ದೇವರಕೊಲ್ಲಿಯ ಅಬ್ಬಿ ಫಾಲ್ಸ್ ಬಳಿ ಟಿಟಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆನ್ನಲಾಗಿದೆ. ಇದೇ ವೇಳೆ ಅದೇ ಮಾರ್ಗವಾಗಿ ಸುಳ್ಯ ಕಡೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಬಾರದೆ ನಿಲ್ಲಿಸಿದ್ದ ಟಿಟಿ ವಾಹನದ ಮೇಲೆ ಮಗುಚಿ ಬಿದ್ದಿದೆ. ಪರಿಣಾಮವಾಗಿ ಟಿಟಿ ವಾಹನದಲ್ಲಿ 7 ಜನ ಪ್ರಯಾಣಿಕರಿದ್ದು ಹಾಗೂ ಲಾರಿ ಚಾಲಕ , ಕ್ಲೀನರ್ ಸೇರಿದಂತೆ ಮೂವರಿಗೆ ಗಂಭೀರ ಗಾಯವಾದ ವರದಿ ತಿಳಿದು ಬಂದಿದೆ. ಕೂಡಲೇ ಗಾಯಾಳುಗಳನ್ನು ಆಂಬುಲೆನ್ಸ್ ವಾಹನಗಳ ಮೂಲಕ ಸುಳ್ಯದ ಆಸ್ಪತ್ರೆಗೆ ರವಾನಿಸಲಾಗಿದೆ. ಸುಳ್ಯ ಆಂಬುಲೆನ್ಸ್ ಚಾಲಕಮಾಲಕ ಸಂಘದ ಸದಸ್ಯರು ಹಾಗೂ ಸ್ಥಳೀಯರು ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.








