ಎಲಿಮಲೆಯ ಕಾರು ಗುಂಡ್ಯದಲ್ಲಿ ಅಪಘಾತ – ಮಾವಿನಕಟ್ಟೆಯ ಕವಿನ್ (ಕಿಶನ್) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ

0

ಎಲಿಮಲೆಯ ಕಾರು ಗುಂಡ್ಯದಲ್ಲಿ ಅಪಘಾತವಾಗಿ ಮಾವಿನಕಟ್ಟೆಯ ಕವಿನ್ (ಕಿಶನ್) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದೇ ನಿಧನರಾದ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ಕವಿನ್ (ಕಿಶನ್) ಮಾವಿನಕಟ್ಟೆ ಮತ್ತು ಹರ್ಷಿತ್ ಎಲಿಮಲೆ ಎಂಬವರು ಆ  25ರಂದು ಹಾಸನ ಸಕಲೇಶಪುರಕ್ಕೆ ತೆರಳಿದ್ದರು. ಸಂಜೆ ಮರಳಿ ಎಲಿಮಲೆಯ ಕಡೆಗೆ ಬರುವಾಗ ಸುಬ್ರಮಣ್ಯ ಹಾಸನ ರಸ್ತೆಯ ಗುಂಡ್ಯದಲ್ಲಿ ಕಾರು ಮತ್ತು ಲಾರಿ ಅಪಘಾತಗೊಂಡು ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡರು ಅವರನ್ನು  ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಕಿಶನ್ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮುಂಜಾನೆ ನಿಧನರಾದರು.
ಕಾರಿನಲ್ಲಿದ್ದ ಹರ್ಷಿತ್ ಎಲಿಮಲೆಯವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.

ದೇವಚಳ್ಳ ಗ್ರಾಮದ ಮಾವಿನಕಟ್ಟೆ ನಾರಾಯಣ ಮತ್ತು ಸುಮಿತ್ರಾ ದಂಪತಿಯ ಪುತ್ರ ಕಿಶನ್ ರವರಿಗೆ 31 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ, ಸಹೋದರ ಲೋಕೇಶ್ ರವರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ನಾಳೆ ಬೆಳಿಗ್ಗೆ 10 ಗಂಟೆಗೆ ಸ್ವಗೃಹದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.