













ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ವತಿಯಿಂದ ಕುಟುಂಬ ಸಮ್ಮಿಲನ ಮತ್ತು ಓಣಂ ಆಚರಣೆಯು ಸೆ. 6 ರಂಸು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡಡಯಲಿದೆ.
ಸುಳ್ಯಂ ಕರಯೋಗಂ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎನ್.ಎಸ್. ಎಸ್. ಹೊಸದುರ್ಗ ಕರಯೋಗಂ ಉಪಾಧ್ಯಕ್ಷ ಕೋಡೋತ್ ಶ್ರೀಕುಮಾರ್ ನಾಯರ್ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕೆ.ಎನ್.ಎಸ್.ಎಸ್. ಮಂಗಳೂರು ಕರಯೋಗಂ ಅಧ್ಯಕ್ಷ ಮುರಳಿ ಹೊಸಮಜಲು, ಸುಳ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಡಾ.ರಾಮ್ ಮೋಹನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕರಯೋಗಂ ಸದಸ್ಯರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿರುವ ಭಾಸ್ಕರನ್ ನಾಯರ್ ಮಧುವನ, ಜನಾರ್ಧನನ್ ನಾಯರ್ ಅರಂತೋಡು, ಬಾಲಕೃಷ್ಣನ್ ನಾಯರ್ ಎಸ್.ಬಿ.ಲ್ಯಾಬ್, ಶಕುಂತಲಾ ಕೃಷ್ಣನ್ ಕುತ್ತಮೊಟ್ಟೆ, ರಮೇಶ್ ನಂಬಿಯಾರ್ ಅವರಿಗೆ ಸನ್ಮಾನ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ಓಣಂ ಸದ್ಯ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.







