ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಚೊಕ್ಕಾಡಿ ವಿದ್ಯಾಸಂಸ್ಥೆಗೆ ಕೊಡುಗೆಗಳ ಹಸ್ತಾಂತರ, ವನಮಹೋತ್ಸವ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಚೊಕ್ಕಾಡಿ ವಿದ್ಯಾಸಂಸ್ಥೆಗಳಿಗೆ ವಿವಿಧ ಕೊಡುಗೆಗಳ ಹಸ್ತಾಂತರ, ತರಬೇತಿ ಕಾರ್ಯಕ್ರಮಗಳು ಹಾಗೂ ವನಮಹೋತ್ಸವ ಕಾರ್ಯಕ್ರಮವು ಸೆ.12 ರಂದು ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷರಾದ ರೋಟರಿಯನ್ ಆರಿಫ್ ಬೆಳ್ಳಾರೆ ವಹಿಸಿದ್ದರು. ವೇದಿಕೆಯಲ್ಲಿ ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ್ ರೈ, ಭಜನಿ, ಚೊಕ್ಕಾಡಿ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ನಿರಂಜನ್ ಕೋಡ್ತುಗುಳಿ, ಸಂಚಾಲಕರಾದ ಸುಪ್ರೀತ್ ಮೋಂಟಡ್ಕ, ಅರುಣ್ ಕುಮಾರ್ ನಾಯರ್ಕಲ್ಲು, ಮಹೇಶ್ ಮೇರ್ಕಜೆ, ಮುಖ್ಯಗುರುಗಳಾದ ಸಂಕೀರ್ತನ್ ಚೊಕ್ಕಾಡಿ, ರೋ. ಪದ್ಮನಾಭ ಬೀಡು ಹಾಗೂ ರೋ. ಹರ್ಷಿತ್ ಉಪಸ್ಥಿತರಿದ್ದರು. ರೋ. ಆರಿಫ್ ಬೆಳ್ಳಾರೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕೊಡುಗೆಗಳ ವಿತರಣೆ, ಸನ್ಮಾನ ಹಾಗೂ ತರಬೇತಿ ಕಾರ್ಯಕ್ರಮಗಳು ಮತ್ತು ವನಮಹೋತ್ಸವ ನಡೆಯಿತು. ರೋಟರಿ ಫೋರ್-ವೇ ಟೆಸ್ಟ್ ಕುರಿತು ತರಬೇತಿಯನ್ನು ರೋ. ವಿನಯ್ ಕುಮಾರ್ ಹಾಗೂ ಹೈಜೀನಿಕ್ ತರಬೇತಿಯನ್ನು ರೋಟರಿಯನ್ ಅನ್ನಪೂರ್ಣಾ ಪುತ್ತೂರು ಅವರು ನಡೆಸಿಕೊಟ್ಟರು. ದಾನಿಗಳಾಗಿ ಸಹಕರಿಸಿದ ರೋ. ಪದ್ಮನಾಭ ಬೀಡು ಹಾಗೂ ರೋ. ಹರ್ಷಿತ್ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ರೊ.ಪ್ರಶಾಂತ್ ಟಿ. ವಂದಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ನ ಸದಸ್ಯರು, ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ವಿದ್ಯಾಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.