













ಸುಳ್ಯ ತಾಲೂಕಿನಲ್ಲಿ ಕೆ.ಎಫ್.ಡಿ.ಸಿಯಲ್ಲಿ 11,000 ಎಕ್ರೆ ಭೂಮಿಯಲ್ಲಿ ಮತ್ತು ಖಾಸಗಿಯಾಗಿ 20,000 ಹೆಕ್ಟೇರ್ ಭೂಮಿಯಲ್ಲಿ ರಬ್ಬರು ಬೆಳೆ ಬೆಳೆಯುತ್ತಾರೆ.
ರಬ್ಬರಿಗೆ ಉತ್ತಮ ಬೆಲೆ ಕೂಡಾ ಇದೆ.
ರಬ್ಬರನ್ನು ಕಚ್ಚಾವಸ್ತುವಾಗಿ ಮಾಡಬೇಕು.ಸುಳ್ಯದಲ್ಲಿ ವಿಶೇಷವಾದ ಪ್ಯಾಕ್ಟರಿಯನ್ನು ನಿರ್ಮಾಣ ಮಾಡಿದರೆ ರಬ್ಬರು ಕಚ್ಚಾವಸ್ತುವಿನಲ್ಲಿ ಹಲವು ಪ್ರೊಡಕ್ಟ್ ಗಳನ್ನು ಮಾಡಬಹುದು.ಇದರಿಂದ ಹೆಚ್ಚಿನ ಜನರಿಗೆ ಉದ್ಯೋಗಾವಕಾಶ ಕೂಡ ದೊರೆಯುತ್ತದೆ.ಇದರಿಂದ ಈ ಭಾಗದ ಜನರಿಗೆ ಉದ್ಯೋಗವು ಸಿಕ್ಕಿದಂತಾಗುತ್ತದೆ.
ಇತ್ತೀಚಿನ ದಿನದಲ್ಲಿ ಸುಳ್ಯದಲ್ಲಿ ಕಾಡುಪ್ರಾಣಿಗಳ ಉಪಟಳ ಜಾಸ್ತಿಯಾಗಿದೆ.ಆನೆಗಳು ಕೃಷಿಕರ ಕೃಷಿ ತೋಟವನ್ನು ಸಂಪೂರ್ಣ ಧ್ವಂಸಗೊಳಿಸುತ್ತಿದೆ.ಇದಕ್ಕೆ ವಿಶೇಷವಾಗಿ ಆನೆಕ್ಯಾಂಪ್ ನಿರ್ಮಾಣಮಾಡಬೇಕು.
ಇದರಿಂದ ಕೃಷಿಕರಿಗೆ ಪ್ರಯೋಜನವಾಗಲಿದೆ.ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಧ್ವನಿಯೆತ್ತಬೇಕು.







