ಅರಂತೋಡು ಕುಲ್ಚಾರ್ ಸೇತುವೆಯಲ್ಲಿ ಸರಣಿ ಅಪಘಾತ

0

ಸುಳ್ಯದಿಂದ ಅರಂತೋಡು ಕಡೆಗೆ ಬರುವ ಸ್ಕೂಟಿ ಹಾಗೂ ಅದರ ಹಿಂದಿನಿಂದ ಬರುತ್ತಿದ್ದ ಕಾರು ಸ್ಕೂಟಿಯನ್ನು ಓವರ್‌ ಟೇಕ್‌ ಮಾಡುವಾಗ ಕೊಯಿನಾಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಬಸ್‌ ಕೂಡಲೇ ಬ್ರೇಕ್‌ ಹಾಕಿದ ಕಾರಣ ಬಸ್‌ ಬಲಗಡೆಗೆ ತಿರುಗಿ ಕಾರಿಗೆ ಡಿಕ್ಕಿ ಆಯಿತು. ಈ ಸಂದರ್ಭದಲ್ಲಿ ಬಸ್‌ ನ ಹಿಂಬದಿಗೆ ಸ್ಕೂಟಿ ತಾಗಿ ರಸ್ತೆಗೆ ಮಗುಚಿ ಬಿತ್ತು. ಸ್ಕೂಟರ್‌ ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಯಾವೂದೇ ಅಪಾಯ ಸಂಭವಿಸಿಲ್ಲ. ಸುಳ್ಯದ ಪೋಲಿಸ್‌ ಅಧಿಕಾರಿ ಹಾಗೂ ಬಸ್‌ ನ ಡಿಪ್ಪೊ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಬಸ್‌ ಅನ್ನು ತೆರವುಗೊಳಿಸಲಾಯಿತು.