ಬೊಳುಬೈಲಿನಲ್ಲಿ ಅಪಘಾತ

0

ರಾಮಕೃಷ್ಣ ಆಲಂಕಲ್ಯರು ಗಂಭೀರ

ಸುಳ್ಯದ ಬೊಳುಬೈಲಿನಲ್ಲಿ ನಡೆದ ಅಪಘಾತದಲ್ಲಿ ಮಂಡೆಕೋಲು ಗ್ರಾಮದ ಆಲಂಕಲ್ಯ ನಿವಾಸಿ ರಾಮಕೃಷ್ಣ ರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.

ರಾಮಕೃಷ್ಣರು ಸ್ಕೂಟಿಯಲ್ಲಿ ಸುಳ್ಯದಿಂದ ಆಲಂಕಲ್ಯಕ್ಕೆ ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಬೊಳುಬೈಲಿನಲ್ಲಿ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ಎದುರಿನಿಂದ ಕಂಟೈನರ್ ವಾಹನ ಬರುತಿತ್ತೆಂದು ಅದಕ್ಕೆ ಸೈಡ್ ಕೊಡುವಾಗ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.