













ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದ್ದು, ಇದು ಮಕ್ಕಳ ದೈಹಿಕ ಹಾಗೂ ಕ್ರೀಡಾ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಮಾತ್ರವಲ್ಲ ಶಾಲೆಗಳಲ್ಲಿ ಶಿಸ್ತು ಪಾಲನೆ ಕಷ್ಟವಾಗುತ್ತಿದೆ. ಕಾರಣ ಈಗಾಗಲೇ ಶಿಕ್ಷಕರ ಕೊರತೆಯೂ ಇದ್ದು, ಲಭ್ಯವಿರುವ ಶಿಕ್ಷಕರು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಹಾಗೂ ಸರಕಾರದ ಇತರೇ ಕೆಲಸ ಕಾರ್ಯಗಳಿಗೂ ಶಿಕ್ಷಕರನ್ನು ನಿಯುಕ್ತಿಗೊಳಿಸುವುದರಿಂದ ಶಿಕ್ಷಕರಿಗೆ ಮಕ್ಕಳ ಬಗ್ಗೆ ವಯಕ್ತಿಕ ಗಮನ ಹರಿಸುವುದು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಮತ್ತು ಮಕ್ಕಳ ನಡುವೆ ಭಾವನಾತ್ಮಕ ಸಂಬಂಧಗಳೂ ದೂರವಾಗುತ್ತಿದೆ.
ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದಿರುವ ಕಾರಣ ಇತ್ತೀಚಿಗೆ ಖಾಸಗಿ ಶಾಲೆಯ ಮಕ್ಕಳೇ ಕ್ರೀಡೆಗಳಲ್ಲಿ ಪ್ರಶಸ್ತಿಗಳನ್ನು ಪಡೆದು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ಹೋಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ವರ್ಷದ ತಾಲೂಕು ಪಂದ್ಯಾಟಗಳಲ್ಲಿ ಎಲ್ಲಾ ಪ್ರಶಸ್ತಿಗಳೂ ಖಾಸಗಿ ಶಾಲೆಗಳ ಪಾಲಾಗಿರುವುದು.
ಆದ್ದರಿಂದ ಸರಕಾರ ತಕ್ಷಣ ದೈಹಿಕ ಶಿಕ್ಷಕರನ್ನು ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಖಾಯಂ ಶಿಕ್ಷಕರನ್ನು ನೇಮಿಸುವುದು ಕಷ್ಟವಾದರೆ ಅತಿಥಿ ದೈಹಿಕ ಶಿಕ್ಷಕರನ್ನಾದರೂ ನೇಮಿಸುವಲ್ಲಿ ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಬೇಕು.
— ರಾಜೇಶ್ ಅಂಬೆಕಲ್ಲು
ಅಧ್ಯಕ್ಷರು, ಸರಕಾರಿ ಪ್ರೌಢಶಾಲೆ ಎಲಿಮಲೆ ಹಿರಿಯ ವಿದ್ಯಾರ್ಥಿ ಸಂಘ







