ಕೃಷಿ ತೋಟಕ್ಕೆ ಆನೆಗಳ ಉಪಟಳ ತಡೆಯುವಂತೆ ಪ್ರಾರ್ಥನೆ














ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.14 ರಂದು ಗಣೇಶ ಚತುರ್ಥಿ ಆಚರಿಸಲಾಯಿತು.
ಬೆಳಿಗ್ಗೆ ಗಣಹೋಮ,ಶ್ರೀ ದೇವರಿಗೆ ವಿಶೇಷ ಪೂಜೆ,ಮಹಾಪೂಜೆ ನಡೆಯಿತು.
ಇತ್ತೀಚೆಗೆ ಗ್ರಾಮದಲ್ಲಿ ಕಾಡಾನೆಗಳು ಕೃಷಿಕರ ತೋಟಕ್ಕೆ ಬಂದು ಅಪಾರ ಕೃಷಿಯನ್ನು ಹಾನಿಮಾಡುತ್ತಿದ್ದು ಆನೆಗಳು ಕೃಷಿಯನ್ನು ಹಾನಿಮಾಡದಂತೆ ಪ್ರಾರ್ಥನೆ ಮಾಡಲಾಯಿತು.
ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎನ್.ಮನ್ಮಥ ಮತ್ತು ಸದಸ್ಯರು,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಮತ್ತು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.







