ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಬೆಳ್ಳಾರೆ ಎಂಡೋ ಪಾಲನಾ ಕೇಂದ್ರಕ್ಕೆ ನೀರಿನ‌ ಟಾಂಕಿ ಕೊಡುಗೆ

0

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ. ಕ.ಉದ್ಭವ್ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಬೆಂಗಳೂರು, ಎಂಡೋ ಸಂತೃಪ್ತರ ಪಾಲನಾ ಕೇಂದ್ರ ಬೆಳ್ಳಾರೆ ಇಲ್ಲಿಗೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ನೀರಿನ ಟಾಂಕಿಯನ್ನು ಸೆ.17 ರಂದು ಕೊಡುಗೆಯಾಗಿ ನೀಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ಅಧ್ಯಕ್ಷ ಆರೀಫ್ ಬಿ.ಎಂ.ವಹಿಸಿದ್ದು ಸ್ವಾಗತಿಸಿ ,ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸಂಸ್ಥೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುವ ಮುಖಾಂತರ ಜನರೊಂದಿಗೆ ಸ್ಪಂದಿಸುತ್ತಿದೆ.ಕೊಡುಗೆಯಾಗಿ ನೀಡಿದ ನೀರಿನ ಟಾಂಕಿ ಸದುಪಯೋಗವಾಗಲಿ ಎಂದು ಶುಭಹಾರೈಸಿದರು.
ರೊ.ವಿನಯ ಬಾರಧ್ವಾಜ್ ರವರು ರೋಟರಿ ಸಂಸ್ಥೆಯ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಟಾಂಕಿಯ ದಾನಿಗಳಾದ ಅಬೂಬಕ್ಕರ್ ಮಂಗಳ,ಉದ್ಯಮಿ ಆದಂ ನೆಟ್ಡಾರು ,ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಪೊಲೀಸ್ ಠಾಣಾ ಎ.ಎಸ್.ಐ.ಕುಂಞ, ರೊ.ವಿಠಲದಾಸ್ ಎನ್.ಎಸ್.ಡಿ, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಶಾಂತ ತಂಟೆಪ್ಪಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳು ಹಾಗೂ ಎಂಡೋ ಸಂತೃಪ್ತರ ಪಾಲನಾ ಕೇಂದ್ರದವರು ಉಪಸ್ಥಿತರಿದ್ದರು.