













ಅಮರಮೂಡ್ನೂರು ಗ್ರಾಮಪಂಚಾಯತ್ ನಲ್ಲಿ ಕಳೆದ 8 ವರ್ಷ ಗಳಿಂದ ಗ್ರೇಡ್-1ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಭಡ್ತಿ ಹೊಂದಿ ಕಡಬ ತಾಲೂಕಿನ ಬಳ್ಪ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡ ದಯಾನಂದ ಪತ್ತುಕುಂಜ ರವರನ್ನುಅಮರಮುಡ್ನೂರು ಪಂಚಾಯತ್ ನಲ್ಲಿ ಗೌರವಿಸಿ ಸೆ.17 ರಂದು ಬೀಳ್ಕೋಡಲಾಯಿತು.
ಅಮರಮುಡ್ನೂರು ಗ್ರಾಮಆಡಳಿತಾಧಿಕಾರಿ ಸುಜನ್ ಕೆ ಆರ್, ಪಂಚಾಯತ್ ಮಾಜಿ ಸದಸ್ಯ ಕೃಷ್ಣಪ್ರಸಾದ ಮಾಡಬಾಕಿಲು ರವರು ಮಾತನಾಡಿ ದಯಾನಂದರ ಪ್ರಾಮಾಣಿಕ ಕರ್ತವ್ಯ ನಿಷ್ಠೆಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದಿಸಿದರು.
ಸ್ಥಳೀಯರಾದ ಪದ್ಮನಾಭ ಬೊಳ್ಳೂರು,ಸಿಬ್ಬಂದಿ ಸಂತೋಷ್ ಮುಂಡಕಜೆ, ಸತ್ಯಪ್ರಸಾದ್ ಪುಳಿಮಾರಡ್ಕ ಮತ್ತಿತರರು ಉಪಸ್ಥಿತರಿದ್ದರು.







