ಕೊಡಿಯಾಲ : ಪೋಷಣ್ ಮಾಸಾಚರಣೆ 2026 ಕಾರ್ಯಕ್ರಮ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ಶ್ರೀ ದೇವಿ ಸ್ತ್ರೀ ಶಕ್ತಿ ಗೊಂಚಲು ಬಾಚೋಡಿ ಕೊಡಿಯಾಲ,ಇವರ ಸಂಯುಕ್ತ ಅಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಕೊಡಿಯಾಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ, 23 ರಂದು ನಡೆಯಿತು.
ಮಕ್ಕಳ ಅಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಶ್ರೀ ಮತಿ ಉಷಾ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು, ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಶ್ರೀ ದೇವಿ ಗೊಂಚಲಿನ ಅಧ್ಯಕ್ಷರಾದ ಶ್ರೀ ಮತಿ ವನಜಾಕ್ಷಿ,ಉಪಾಧ್ಯಕ್ಷರಾದ ಶ್ರೀಮತಿ ಲತಾ, ಶ್ರೀಮತಿ ಉಷಾ ರೈ ಮೇಲ್ವಿಚಾರಕರು ಬೆಳ್ಳಾರೆ ವಲಯ, ಶ್ರೀಮತಿ ರೇಷ್ಮ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಕೊಡಿಯಾಲ, ಹಾಗೂ ಕೊಡಿಯಾಲ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಶ್ರೀ ದೇವಿ ಗೊಂಚಲಿನ ಗೌರವ ಅಧ್ಯಕ್ಷರಾದ ಶ್ರೀಮತಿ ವಸಂತಿ ಪೈ ಉಪಸ್ಥಿತರಿದ್ದರು,ವಲಯ ಮೇಲ್ವಿಚಾರಕರು ಶ್ರೀಮತಿ ಉಷಾ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು, ಅರೋಗ್ಯ ಸಹಾಯಕಿ ರೇಷ್ಮ ರವರು ಪೌಷ್ಟಿಕ ಆಹಾರ ಮತ್ತು ಗರ್ಭಿಣಿ ಬಾಣಂತಿಯರ ಮತ್ತು ಜಂತುಹುಳ ನಿರ್ವಹಣೆ ರಕ್ತಹೀನತೆ, ಮುಟ್ಟಿನ ಸಮಸ್ಯೆ ಬಗ್ಗೆ ಮಕ್ಕಳಿಗೆ ತಿಳಿಸುವ ಬಗ್ಗೆ ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಭಾರತೀಯ ಸಂಸ್ಕೃತಿಯಲ್ಲಿ ಸೀಮಂತ ಕಾರ್ಯಕ್ರಮ,ಹಾಗೂ ಚಿಕ್ಕ ಮಕ್ಕಳಿಗೆ ಅನ್ನ ಪ್ರಶಾನ, ಕಾರ್ಯಕ್ರಮ ನಡೆಸಲಾಯಿತು,ನಂತರ ಪೌಷ್ಟಿಕ ಆಹಾರವನ್ನು ಎಲ್ಲರೂ ಸವಿಯಾಲಾಯಿತು.ಈ ಸಂದರ್ಭದಲ್ಲಿ ಶ್ರೀ ಗೌರಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು MBK, LCRP, ಕೃಷಿ ಸಖಿ SHG KYC ಮಾಡಲಾಯಿತು.