ಚೆನ್ನಕೇಶವ ದೇವಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ














ಅಕ್ಟೋಬರ್ 9, 10 ಮತ್ತು 11ರಂದು ಮೂರು ದಿನಗಳ ಕಾಲ ಸುಳ್ಯದ ಅಮರಶ್ರೀಭಾಗ್ ನಲ್ಲಿರುವ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ‘ಸಂಕಲ್ಪ’ ಮಕ್ಕಳ ಹಬ್ಬ 2026 ರ ಕಾರ್ಯಕ್ರಮ ನಡೆಯಲಿದ್ದು,ಇದರ ಆಮಂತ್ರಣ ಬಿಡುಗಡೆ ಸೆ.24ರಂದು ಬೆಳಗ್ಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.
ರಂಗಮಯೂರಿ ಕಲಾ ಶಾಲೆ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಮಕ್ಕಳ ಹಬ್ಬ ನಡೆಯಲಿದ್ದು,
ಬೆಳಗ್ಗೆ ಚೆನ್ನಕೇಶವ ದೇವಸ್ಥಾನದಲ್ಲಿ ಅರ್ಚಕರಾದ ಹರಿಕೃಷ್ಣ ವಾರಂಬಳಿತ್ತಾಯರ ನೇತೃತ್ವದಲ್ಲಿ
ಪ್ರಾರ್ಥಿಸಿ ಪೂಜೆ ನೆರವೇರಿಸಲಾಯಿತು.
ಬಳಿಕ ಆಮಂತ್ರಣ ಪತ್ರವನ್ನು ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ ಯವರು ಬಿಡುಗಡೆಗೊಳಿಸಿ “ಮಕ್ಕಳ ಹಬ್ಬ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು, ಪ್ರಣವ ಸೌಹಾರ್ದ ಸಹಕಾರ ಸಂಘದ ಸುಳ್ಯ ಶಾಖೆಯ ಮ್ಯಾನೇಜರ್ ರಂಜಿತ್ ಅಡ್ತಲೆ,
ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್, ಸುದ್ದಿ ಸುಳ್ಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸುಳ್ಯ ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು, ಅರೆಭಾಷೆ ಅಕಾಡೆಮಿ ಸದಸ್ಯಡಾ.ಎನ್.ಎ.ಜ್ಞಾನೇಶ್, ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ,
ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಸುಳ್ಯ ಎ.ಒ.ಎಲ್.ಇ. ಕಮಿಟಿ ಬಿ ಯ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕ್ಷೇತ್ರ ಶಿಕ್ಷಣ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ರವೀಶ್ ಪಡ್ಡಂಬೈಲು, ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷೆ ಶ್ರೀಮತಿ ನಾಗವೇಣಿ ಕೋರಡ್ಕ , ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಕೃಷ್ಣ ಬೆಟ್ಟ, ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ, ಶ್ರೀಮತಿ ಜಯಕೃಷ್ಣ ಬೆಟ್ಟ, ಶ್ರೀಮತಿ ಸೌಮ್ಯ ಆಳಂಕಲ್ಯ, ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ದಿನೇಶ್, ಉಪನ್ಯಾಸಕಿ ಶ್ರೀಮತಿ ಸುಸ್ಮಿತಾ ಜಾಕೆ, ಪುಷ್ಪ ರಾಜ್ ಏನೆಕಲ್ಲು, ಪತ್ರಕರ್ತರಾದ ತೇಜಶ್ವರ ಕುಂದಲ್ಪಾಡಿ, ಸುದ್ದಿ ಪ್ರದಾನ ವರದಿಗಾರ ಶಿವಪ್ರಸಾದ್ ಕೇರ್ಪಳ, ಅನಿಲ್ ಸಂಪ, ಉಪಸ್ಥಿತರಿದ್ದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ವಂದಿಸಿದರು.







