ಯುವ ಕೃಷಿಕ ಶ್ರೇಯಸ್ ಸುಳ್ಳಿಯವರಿಗೆ ಮುಖ್ಯಮಂತ್ರಿಯವರಿಂದ ವಿಕೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ

0

ವಿಜಯ ಕರ್ನಾಟಕ ಮತ್ತು ಟೈಮ್ಸ್ ಆಫ್ ಇಂಡಿಯಾ ಕೊಡಮಾಡುವ 2025-26ನೇ ಸಾಲಿನ ವಿಕೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ರಾಜ್ಯಮಟ್ಟದ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ಸ್ನೇಹಕುಂಜಾ ಫಾರ್ಮ್ಸ್ ನ ಶ್ರೇಯಸ್ ಸುಳ್ಳಿ ಆಯ್ಕೆಯಾಗಿದ್ದು, ಸೆ. 25ರಂದು (ನಿನ್ನೆ) ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.

ಹಣ್ಣಿನ ಕೃಷಿಯಲ್ಲಿ ಹೊಸ ಪ್ರಯತ್ನಗಳನ್ನು ಅಳವಡಿಸಿಕೊಂಡು, ಯುವ ಕೃಷಿಕನಾಗಿ ಗುರುತಿಸಿಕೊಂಡು ಹಾಗೂ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆಸಿದ ಸಾಧನೆ ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ಪದ್ಮನಾಭ ಗೌಡ ಮತ್ತು ಮಾಲತಿ ದಂಪತಿಯ ಪುತ್ರ.

ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಶ್ರೇಯಸ್ ರವರ ಬಂಧುಮಿತ್ರರಾದ ಸುಖನ್ಯ ಕೂಜುಗೋಡು, ಯತೀಶ್ ಕೂಜುಗೋಡು, ರೀತ ಕೆ. ಪಿ., ರವಿ ಮೂಲೆಮಜಲು, ಆರತಿ, ಸುಧಾಕರ ನಾಯ್ಮರ್, ನಿರೀಕ್ಷಾ ಕೊಯಿಂಗೋಡಿ, ಸಹೋದರಿ ಶ್ವೇತಾ ಎಸ್. ಪಿ. ಹಾಗೂ ತಂದೆ ಪದ್ಮನಾಭ ಗೌಡ ಮತ್ತು ತಾಯಿ ಮಾಲತಿ ಉಪಸ್ಥಿತರಿದ್ದರು.