ಸುಳ್ಯ ದಸರಾ: ಡಿ.ಜೆ ಫ್ರೆಂಡ್ಸ್ ವತಿಯಿಂದ 8 ನೇ ವರ್ಷದ ಹುಲಿವೇಷ- ಪಿಲಿನಲಿಕೆ

0

ಕಲ್ಕುಡ ಸಾನಿಧ್ಯದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ದಸರಾ ಉತ್ಸವದ ಅಂಗವಾಗಿ ಡಿ.ಜೆ.ಫ್ರೆಂಡ್ಸ್ ಇದರ ವತಿಯಿಂದ 8 ನೇ ವರ್ಷದ ಹುಲಿವೇಷ ಹಾಗೂ ಪಿಲಿನಲಿಕೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಕಲ್ಕುಡ ದೈವಸ್ಥಾನದಲ್ಲಿ
ಸೆ.26 ರಂದು ಬೆಳಗ್ಗೆ ನೆರವೇರಿತು.

ಅ.23 ರಂದು ರಾತ್ರಿ ಜೆ.ಒ.ಸಿ. ಮೈದಾನದಲ್ಲಿ ಹುಲಿವೇಷದ ಊದು ಪೂಜೆಯು ನಡೆಯಲಿದೆ. ಅ.24 ರಂದು ರಾತ್ರಿ ವಿಶೇಷ ಪಿಲಿನಲಿಕೆಯು ನಡೆಯಲಿರುವುದು.
ಕಲ್ಕುಡ ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಡಿ.ಜೆ ಫ್ರೆಂಡ್ಸ್ ಇದರ ಸ್ಥಾಪಾಕಾಧ್ಯಕ್ಷ ದೀಪಕ್ ರಾಜ್ ಆಲೆಟ್ಟಿ, ಅಧ್ಯಕ್ಷ ಮಂಜುನಾಥ್ ,ಪದಾಧಿಕಾರಿಗಳಾದ ದೀಕ್ಷಿತ್ ರಾವ್, ಭರತ್, ರಂಜನ್, ಲತೀಶ್, ನಿತಿನ್, ಸಚಿನ್, ರಾಕೇಶ್, ದಿನೇಶ್, ಶಿವಪ್ರಸಾದ್, ಕಾರ್ತಿಕ್ ,ಜಿತೇಶ್, ಪ್ರಸನ್ನ, ನಿಶಾಂತ್, ನಿಖಿಲ್ ಮತ್ತಿತರರು ಉಪಸ್ಥಿತರಿದ್ದರು.