ಅ.17,18 : ಐವರ್ನಾಡಿನಲ್ಲಿ ಶ್ರೀ ಶಾರದಾ ಪೂಜಾ ಮಹೋತ್ಸವ : ಅಮಂತ್ರಣ ಪತ್ರಿಕೆ ಬಿಡುಗಡೆ

0

ಯುವಶಕ್ತಿ ಸಂಘ ಐವರ್ನಾಡು,ಸಾರ್ವಜನಿಕರ ಸಹಕಾರದೊಂದಿಗೆ ಅ.17 ಮತ್ತು ಅ.18 ರಂದು ಐವರ್ನಾಡು ಸ.ಹಿ.ಪ್ರಾ.ಶಾಲಾ ಶ್ರೀ ಮಾತಾಜಿ ಸಭಾಭವನದ “ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ” ರಂಗಮಂದಿರದಲ್ಲಿ ನಡೆಯಲಿರುವ ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಅ.06 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲರವರು ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಯುವಶಕ್ತಿ ಸಂಘದ ಅಧ್ಯಕ್ಷ ರೊ.ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್ ,ಕಾರ್ಯದರ್ಶಿ ಚೇತನ್ ಮಿತ್ತಮೂಲೆ ಮತ್ತು ಸದಸ್ಯರು ಹಾಗೂ ಕರುಣಾಕರ ಮಡ್ತಿಲ,ರಾಧಾಕೃಷ್ಣ ಚಾಕೋಟೆ,ರಮೇಶ ಮಿತ್ತಮೂಲೆ,ಕುಸುಮಾಧರ ಬಜಂತಡ್ಕ,ಪ್ರಮೋದ್ ಪಾಲೆಪ್ಪಾಡಿ,ಜಯಪ್ರಕಾಶ್ ,ದಿನೇಶ್ ನಾಟಿಕೇರಿ,ಪುರುಷೋತ್ತಮ ಕುಳ್ಳಂಪಾಡಿ,ಲೋಕೇಶ್ ಕತ್ಲಡ್ಕ,ಸುದ್ದಿ ಪತ್ರಿಕೆ ವರದಿಗಾರರಾದ ಗಣೇಶ್ ಕುಕ್ಕುದಡಿ,ರಮೇಶ್ ನೀರಬಿದಿರೆ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.