ಸುದ್ದಿ ವರದಿಯ ಫಲಶ್ರುತಿ-ಸಂಪರ್ಕ ಕಡಿತಗೊಳ್ಳಲಿರುವ ರಸ್ತೆ ಪರಿಶೀಲಿಸಿ ಸ್ಪಂದಿಸಿದ ಗ್ರಾಮ ಪಂಚಾಯತ್ ಮತ್ತು ಪಂಚಾಯತ್ ರಾಜ್ ಇಲಾಖೆ

0

ಚೆಂಬು ಗ್ರಾಮ ಮತ್ತು ಅರಂತೋಡು ಗ್ರಾಮವನ್ನು ಸಂಪರ್ಕಿಸುವ ಬಾಲಂಬಿ- ಪೆತ್ತಾಜೆ ಗ್ರಾಮ ಸಡಕ್ ರಸ್ತೆಯ ಕೆಲ್ಸಿಕಾನ ಸೇತುವೆಯು ಸಂಪರ್ಕ ಕಡಿತವಾಗುವ ಸಾಧ್ಯತೆಯು ಇದ್ದು, ಇದು ನಿನ್ನೆಯಷ್ಟೇ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು.ಇದಕ್ಕೆ ಕೂಡಲೇ ಸ್ಪಂದಿಸಿದ ಸ್ಥಳೀಯ ನಾಯಕರಾದ ರವಿರಾಜ್ ಹೊಸೂರು ರವರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರು.ಇದರಂತೆ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಯಣ್ಣ,ಸಹಾಯಕ ಅಭಿಯಂತರರಾದ ಅಶೋಕ್,ಚೆಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಿವು ಎನ್ ರವರುಗಳು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾಹಿತಿ ನೀಡಿದ ಅವರು ತಾತ್ಕಾಲಿಕವಾಗಿ ಸೇತುವೆ ಮತ್ತು ರಸ್ತೆಗೆ ಅಪಾಯವಾಗದಂತೆ ಕಾಮಗಾರಿ ನಡೆಸಿ ಮುಂದೆ ಶಾಶ್ವತ ಪರಿಹಾರ ಮಾಡುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ಗುತ್ತಿಗೆದಾರರಾದ ಅಶ್ರಫ್ ಸೆಂಟಿಯಾರ್,ಪದ್ಮನಾಭ ಮಂಗಳಪಾರೆ ಹಾಜರಿದ್ದರು.