













ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಶನ್ (ರಿ) ಗಾಂಧಿನಗರ ಸುಳ್ಯ ಇದರ ವತಿಯಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಮಂಗಳೂರಿನ ಯೇನಪ್ಪೊಯ ವಿಶ್ವ ವಿದ್ಯಾನಿಲಯ ಕಾಲೇಜಿನ ದ್ವಿತೀಯ ವರ್ಷದ BBA (Logistics & Aviation) ವ್ಯಾಸಂಗ ಮಾಡುತ್ತಿರುವ ಸುಳ್ಯ ಗಾಂಧಿನಗರ ನಿವಾಸಿ ಮರ್ಹೂಂ ಹಮೀದ್ ಇಮ್ರಾನ್ ರವರ ಪುತ್ರ ಮಹಮ್ಮದ್ ಝೈನುದ್ದೀನ್ ಝಿದಾನ್ ರವರಿಗೆ ಅನ್ಸಾರ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಇಪ್ಪತೈದು ಸಾವಿರ ರೂ ಸಹಾಯದನ ಚೆಕ್ಕನ್ನು ಸಂಸ್ಥೆಯ ಅದ್ಯಕ್ಷರಾದ ಕೆ.ಬಿ ಇಬ್ರಾಹಿಂ ವಿತರಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅದ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಜನತ,ಪ್ರಧಾನ ಕಾರ್ಯದರ್ಶಿ ಬಿ.ಯಂ ಹನೀಫ್,ನಿರ್ದೇಶಕರಾದ ಅಬೂಬಕ್ಕರ್ ಎಸ್.ಪಿ ಹಾಗೂ ಮೇನೇಜರ್ ಮುನೀರ್ ಉಪಸ್ತಿತರಿದ್ದರು.







