,ಹರಿಹರ ಪಲ್ಲತ್ತಡ್ಕ ದ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯು ಅ. 8ರಂದು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.

ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕವಿತಾ ನಿತ್ಯಾನಂದ ಎಲ್ಲಪಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು














ವೇದಿಕೆಯಲ್ಲಿ ಪಂಚಾಯತ್ ಪಿಡಿಒ ಶ್ಯಾಂ ಪ್ರಸಾದ್, ಕಾರ್ಯದರ್ಶಿ ಚಿದಾನಂದ , ಪ್ರಕೃತಿ ಸಂಜಿವಿನಿ ಒಕ್ಕೂಟದ ಉಪಾದ್ಯಕ್ಷೆ ಮೋಹಿನಿ ಕೆದಿಲ, ಕಾರ್ಯದರ್ಶಿ ಪುಷ್ಪಲತಾ ಮುಂಡೋಕಜೆ, ಎಲ್ಲಾ ಪದಾಧಿಕಾರಿಗಳು, ಎನ್ಆರ್ಎಲ್ಎಮ್ ಪಂಜ ವಲಯದ ಸೂಪರ್ವೈಸರ್ ಮಹೇಶ್, ತಾಲೂಕು ಆರೋಗ್ಯ ಅಧಿಕಾರಿ ಪ್ರಮೀಳಾ, ಕೆನರಾ ಬ್ಯಾಂಕ್ ಸುಳ್ಯ ಇದರ ಆಪ್ತ ಸಮಾಲೋಚಕಿ ಸುಜಾತಾ ಉಪಸ್ಥಿತರಿದ್ದರು.

ಕಾವ್ಯ ಶ್ರೀ ಅವರು ವಾರ್ಷಿಕ ವರದಿ ವಾಚಿಸಿದರು. ಎಮ್ ಬಿ ಕೆ ವೇದಾವತಿ ಲೆಕ್ಕಪತ್ರ ಮಂಡಿಸಿದರು
ಎಲ್ ಸಿ ಆರ್ ಪಿ ಸವಿತ ಸ್ವಾಗತಿಸಿ, ಎಮ್ ಬಿ ಕೆ
ವೇದಾವತಿ ದನ್ಯವಾದಗೈದರು, ಅನಿತ ಬಾಳುಗೋಡು ಕಾರ್ಯಕ್ರಮ ನಿರೂಪಿಸಿದರು.
ವರದಿ : ಕುಶಾಲಪ್ಪ ಕಾಂತುಕುಮೇರಿ








