ಮನೆಯೊಳಗಿದ್ದ ಮಕ್ಕಳನ್ನು ಕಂಡು ಕಳ್ಳ ಪರಾರಿ
ಆರೋಪಿಯ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ ಸುಳ್ಯ ಪೊಲೀಸರು
ಸುಳ್ಯ ದೇವಸ್ಯ ಬಳಿ ಮನೆಯೊಂದರ ಬಾಗಿಲ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳನಿಗೆ ಮನೆಯೊಳಗಿದ್ದ ಮಕ್ಕಳನ್ನು ಕಂಡು ಗಾಬರಿಗೊಂಡು ಅಲ್ಲಿಂದ ಪರಾರಿಯಾಗಿ, ಬಳಿಕ ಪೊಲೀಸರು ಆತನನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿರುವ ಮತ್ತು ನ್ಯಾಯಾಲಯದಿಂದ ನ್ಯಾಯಾಂಗ ಬಂಧನ ವಿಧಿಸಿರುವ ಘಟನೆ ಅ 8ರಂದು ನಡೆದಿದೆ.














ಬಂದಿತ ಆರೋಪಿ ಆರೋಪಿ ಕೇರಳ ಮೂಲದ ಕೋಝಿಕೋಡ್ ನಿವಾಸಿ ಮಹಮ್ಮದ್ ಅಲಿ 67 ವರ್ಷ ಎಂಬುವವನಾಗಿದ್ದು
ಅ 8ರಂದು ಸುಮಾರು 10.30 ರ ವೇಳೆಗೆ ಸುಳ್ಯದ ಪ್ರಭು ಗ್ರೌಂಡ್ ಬಳಿ ಬಾಲಕೃಷ್ಣ ಎಂಬುವವರ ಮನೆ ಬಳಿ ಬಂದು ಮನೆಯ ಬೀಗವನ್ನು ಹೊಡೆದು ಒಳಗೆ ಪ್ರವೇಶಿಸಿದ್ದಾನೆ.
ಮನೆಯವರು ಬೆಳಿಗ್ಗೆ 09.30 ಗಂಟೆಗೆ ಕೆಲಸಕ್ಕೆ ಹೋಗಿದ್ದು ಅಂದು ಶಾಲೆಗೆ ರಜೆ ಇದ್ದ ಕಾರಣ ಮನೆಯವರು ಅವರ ಮೂರು ಮಕ್ಕಳನ್ನು ಮನೆಯಲ್ಲಿ ಕೂರಿಸಿ ಹೊರಗಿನಿಂದ ಬೀಗ ಹಾಕಿ ಹೋಗಿದ್ದರು ಎಂದು ತಿಳಿದುಬಂದಿದೆ. ಮಕ್ಕಳು ಒಳಗಿನಿಂದ ಚಿಲಕ ಹಾಕಿಕೊಂಡು ಮನೆಯೊಳಗೆ ಇದ್ದ ಸಮಯ ಮನೆಯ ಬಳಿಗೆ ಬಂದಿದ್ದ ಖದೀಮ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಮನೆಯೊಳಗೆ ಮಕ್ಕಳು ಇರುವುದನ್ನು ಕಂಡು ಮನೆಯ ಬಾಗಿಲ ಚೀಲಕವನ್ನು ಹೊರಗಿನಿಂದ ಹಾಕಿ ಪರಾರಿಯಾಗಿರುತ್ತಾನೆ.
ಈ ಸಂದರ್ಭದಲ್ಲಿ ಮಕ್ಕಳು ಕೂಡಲೇ ತಂದೆ ಬಾಲಕೃಷ್ಣರವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದು ಬಾಲಕೃಷ್ಣರವರು ಮನೆಗೆ ಬಂದು ನೋಡಿದಾಗ ಮಕ್ಕಳು ಎಲ್ಲಾ ವಿಷಯವನ್ನು ಅವರಿಗೆ ತಿಳಿಸಿದ್ದಾರೆ.
ಬಳಿಕ ಬಾಲಕೃಷ್ಣರವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ನೀಡಿದ್ದು ಸುಳ್ಯ ಪೊಲೀಸರು ಆರೋಪಿಯನ್ನು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಪೊಲೀಸ್ ತನಿಖೆಯಲ್ಲಿ ಆರೋಪಿಯ ವಿರುದ್ಧ ಕೇರಳ ರಾಜ್ಯಾದ್ಯಂತ ಹಲವು ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿರುವ ಬಗ್ಗೆ ತಿಳಿದು ಬಂದಿದ್ದು ಉಪನಿರೀಕ್ಷಕರ ಉದಯರವಿ ಎಂ ವೈ ರವರ ಮಾರ್ಗದರ್ಶನದಲ್ಲಿ ಸುಳ್ಯ ಪೊಲೀಸರು ಆಲೆಟ್ಟಿ ಎಂಬಲ್ಲಿ ಆತನನ್ನು ಬಂದಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿದಿಸಿರುತ್ತದೆ.







