ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನ ದಲ್ಲಿ ನವರಾತ್ರಿ ಪೂಜಾರಂಭ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯರ ಬಳಗದ ವೈದಿಕ ಕಾರ್ಯ ಕ್ರಮಗಳೊಂದಿಗೆ ಅ. 10 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಬೆಳಿಗ್ಗೆ ಹಸಿರುವಾಣಿ ಮೆರವಣಿಗೆಯೊಂದಿಗೆ ಸಾಗಿ ದೇವಳಕ್ಕೆ ಸಮರ್ಪಣೆ ಮಾಡಲಾಯಿತು.ಭಕ್ತಾದಿಗಳಿಂದ ಬೆಳಿಗ್ಗೆಯಿಂದಲೇ ಶ್ರಮದಾನ, ಸಂಜೆ ಪ್ರಾರ್ಥನೆ, ಮಾಮೂಲು ರಂಗ ಪೂಜೆ, ಸೇವಾ ರಂಗ ಪೂಜೆ , ಅಲಂಕಾರ ಪೂಜೆ ನಿತ್ಯ ಪೂಜೆ, ದುರ್ಗಾ ಪೂಜೆ, ಹೂವಿನ ಪೂಜೆ,ಕಾರ್ತಿಕ ಪೂಜೆ, ಕುಂಕುಮಾರ್ಚನೆ,ಪ್ರಾರ್ಥನೆ, ನಾನಾ ಪೂಜೆಗಳು ನಡೆದವು. ಮಧ್ಯಾಹ್ನ, ರಾತ್ರಿ ಅನ್ನ ಪ್ರಸಾದ ಭೋಜನ, ಸಂಜೆ ಕಾರ್ತಿಕೆಯ ಭಜನಾ ಮಂಡಳಿ ಪುಂಚತ್ತಾರು ಹಾಗೂ ಮಹಿಳೆಯರಿಂದ ಭಜನಾ ಸೇವೆ, ಮಹಿಷಮರ್ದಿನಿ ಧಾರ್ಮಿಕ ಹಾಗೂ ಸಂಸ್ಕಾರ ಕೇಂದ್ರ ಕೇರ್ಪಡ ಇದರ ವಿದ್ಯಾರ್ಥಿಗಳಿಂದ ರಾಮ ರಕ್ಷಾ ಸ್ತೋತ್ರ ಹಾಗೂ ಭಜನಾ ಕಾರ್ಯ ಕ್ರಮ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎನ್. ಜಿ. ಲೋಕನಾಥ ರೈ, ಸದಸ್ಯರಾದ ವೇಣುಗೋಪಾಲ್ ರೈ ಕಲ್ಲೇರಿ, ಲೋಕೇಶ್ ಕೇರ್ಪಡ,ವಾಚಣ್ಣ ಗೌಡ ಹುದೇರಿ, ಶ್ರೀಮತಿ ಗುಣವತಿ ನಾವೂರು,, ಪ್ರಮೋದ್ ಕುಮಾರ್ ರೈ ಕಟ್ಟ ಹೊಸಜಾಲು, ಬಿಜಿಲ ಅಲೆಕ್ಕಾಡಿ, ಶ್ರೀಮತಿ ಕಸ್ತೂರಿ ಮೊಂಟಪಾದೆ ಹಾಗೂ ಊರ ಪರ ಊರ ಭಕ್ತರು ಉಪಸ್ಥಿತರಿದ್ದರು.ಸಿಬ್ಬಂದಿಗಳಾದ ರಾಮಚಂದ್ರ ಪೂಜಾರಿ ನೂಜಾಡಿ ಮತ್ತು ದೀಪಕ್ ರೈ,ಲಿಂಗಪ್ಪ ಗೌಡ ಕೇರ್ಪಡ ಸಹಕರಿಸಿದರು.

ಅ.21 ರಂದು ಧಾರ್ಮಿಕ ಸಭಾ ಕಾರ್ಯ ಕ್ರಮ

ಅ.21 ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್. ಜಿ. ಲೋಕನಾಥ ರೈ ಯವರು ಅಧವಹಿಸಲಿರುವರು, ಸುಳ್ಯ ಶಾಸಕರಾದ ಕು ಭಾಗೀರಥಿ ಮುರುಳ್ಯ ರವರು ಕಾರ್ಯ ಕ್ರಮ ಉದ್ಘಾಟಿಸಲಿರುವರು. ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಧಾರ್ಮಿಕ ಉಪನ್ಯಾಸ ನೀಡಲಿರುವರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಲಕ್ಷ್ಮೀಶ ಗಬ್ಲಡ್ಕ ಭಾಗವಹಿಸಲಿದ್ದಾರೆ‌.ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಮತಿ ಪ್ರವೀಣಾ ಪ್ರಶಾಂತ್ ರೈ ಮರುವಂಜ, ನ್ಯಾಯವಾದಿ ಹಾಗೂ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಗದೀಶ್ ಹುದೇರಿ, ಪೂದೆ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಭುವನೇಶ್ವರ ಪೂದೆ,ಬೆಂಗಳೂರು ಶ್ರೀ ಮೂಕಾಂಬಿಕಾ ಅಸೋಸಿಯೇಟ್ಸ್ ಮತ್ತು ಶ್ರೀ ಲಕ್ಷ್ಮಿ ಅಸೋಸಿಯೇಟ್ಸ್ ಮಾಲಕ ಸಂತೋಷ್ ಕುಮಾರ್ ಅಲೆಕ್ಕಾಡಿ ಉಪಸ್ಥಿತರಿರುವರು.