ಸುಳ್ಯ ಶೃಂಗಾರ್ ಬ್ಯೂಟಿ ಸೆಂಟರ್ ಮಾಲಕ ಚಿದಾನಂದ ಮೋಂಟಡ್ಕ ರವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಸುಳ್ಯ ದ ಬಾಳೆಮಕ್ಕಿಯಲ್ಲಿರುವ ಶೃಂಗಾರ್ ಬ್ಯೂಟಿ ಸೆಂಟರ್ ನ ಮಾಲಕ ಚಿದಾನಂದ ಮೋಂಟಡ್ಕ ರವರು ಸೆ.25 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಅ.10 ರಂದು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ
ನಡೆಯಿತು.


ಮಾಜಿ‌ ಪ್ರಾಂಶುಪಾಲರಾದ ಸೀತಾರಾಮ ಕೇವಳ
ರವರು ದಿ. ಚಿದಾನಂದ ಮೋಂಟಡ್ಕರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು. ಆಗಮಿಸಿದ ನೂರಾರು ಜನರು ಚಿದಾನಂದ ಮೋಂಟಡ್ಕ ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಪತ್ನಿ
ಶ್ರೀಮತಿ ಭಾರತಿ ಚಿದಾನಂದ ಮೋಂಟಡ್ಕ ,ಪುತ್ರಿಯರಾದ
ಶ್ರೀಮತಿ ಅಂಕಿತ ,ಕು.ಮಯೂರಿ ಮೋಂಟಡ್ಕ, ಪುತ್ರ ಶ್ರೀರಾಮ ಮೋಂಟಡ್ಕ,ಅಳಿಯ
ಸಚಿನ್ ಪಂಜಿಪಳ್ಳ
ಸಹೋದರರಾದ ಗಣೇಶ ಮೋಂಟಡ್ಕ, ದಿನೇಶ ಮೋಂಟಡ್ಕ, ಸಹೋದರಿಯರಾದ ಶ್ರೀಮತಿ ಸುನಂದ ಪರಮಲೆ, ಶ್ರೀಮತಿ ಸುಮತಿ ಸದಾನಂದ ದೇರಾಜೆ, ನಾದಿನಿಯಾರಾದ ಶ್ರೀಮತಿ ಸವಿತ ಗಣೇಶ, ಶ್ರೀಮತಿ ಪ್ರತಿಮಾ ದಿನೇಶ, ಬಾವ ಸದಾನಂದ ದೇರಾಜೆ, ಕುಟುಂಬದ ಹಿರಿಯರಾದ ಚೆನ್ನಕೇಶವ ಕಟ್ಟಮುಚ್ಚುರು,ಬಾವ ಜಯರಾಮ ಗುಡ್ಡೆಮನೆ,ಶಿವಪ್ಪ ಗೌಡ ತಾಳಿಪಡ್ಪು ,
ಬಾಬು ಗೌಡ ಕೊಂಗಿಲಾಯ
ಹಾಗೂ ಮೊಮ್ಮಕ್ಕಳು,ಮೋಂಟಡ್ಕ
ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.