ಸಮುದಾಯದ ಏಳಿಗೆ ಜೊತೆಗೆ ಜನ ಸಾಮಾನ್ಯರ ಆರ್ಥಿಕ ನೆರವಿನ ಹೆಮ್ಮರವಾಗಿರುವ ಸೊಸೈಟಿ : ಕು.ಭಾಗೀರಥಿ ಶ್ಲಾಘನೆ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಸುಳ್ಯ ಇದರ 25 ನೇ ಶಾಖೆಯು ಗುತ್ತಿಗಾರಿನಲ್ಲಿ ಅ.11 ರಂದು ಉದ್ಘಾಟನೆಗೊಂಡಿತು.
ನೂತನ ಶಾಖೆಯ ಉದ್ಘಾಟನೆಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ನೆರವೇರಿಸಿದರು.















ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ದೀಪ ಪ್ರಜ್ವಲಿಸಿದರು. ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ ಸಭಾಧ್ಯಕ್ಷತೆ ವಹಿಸಿದ್ದರು . ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಕೃಷಿಕರಾದ ದೇವಸ್ಯ ಮೋಹನ್ ಗೌಡ ನೆರವೇರಿಸಿದರು. ಗಣಕೀರಣ ಉದ್ಘಾಟನೆಯನ್ನು ಮಾಜಿ ಜಿ.ಪಂ. ಅಧ್ಯಕ್ಷ ವೆಂಕಟ್ ದಂಬೆಕೋಡಿ ನೆರವೇರಿಸಿದರು . ಪ್ರಥಮ ಪಾಲು ಪತ್ರವನ್ನು ದೇವಸ್ಯ ಮೋಹನ ಗೌಡ ವಿತರಿಸಿದರೆ, ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು , ಪ್ರಥಮ ಸಾಲ ಪತ್ರವನ್ನು ಗುತ್ತಿಗಾರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ ವಿತರಿಸಿದರು.
ಪ್ರಥಮ ಠೇವಣಿ ಪತ್ರವನ್ನು ಕೃಷಿಕರಾದ ಕೆ.ವಿ.ಸುಧೀರ್ ಕೂಜುಗೋಡು ಕಟ್ಟೆಮನೆ ವಿತರಿಸಿದರು.
ಉದ್ಘಾಟನಾ ಸಮಾರಂಭವು ಗುತ್ತಿಗಾರು ಸೊಸೈಟಿಯ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.
ವೆಂಕಟರಮಣ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಸಹಕಾರಿ ರತ್ನ ನಿತ್ಯಾನಂದ ಮುಂಡೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ” ಸುಮಾರು 29 ವರ್ಷಗಳ ಹಿಂದೆ ಗೌಡರ ಯುವ ಸೇವಾ ಸಂಘವನ್ನು ಕಟ್ಟುವ ಯೋಚನೆಯ ಉದ್ದೇಶದಿಂದ ಸಮಾಜದ ಎಲ್ಲರನ್ನು ಒಟ್ಟು ಸೇರಿಸುವ ಕಾರ್ಯವನ್ನು ಮಾಡುವ ಪ್ರಯತ್ನದಲ್ಲಿ ಸಾಗಿದೆ. ನಮ್ಮ ಯೋಚನೆಯ ಅಡಿಪಾಯದಲ್ಲೆ ಸಹಕಾರಿ ಸಂಘವನ್ನು ಸ್ಥಾಪಿಸಿದ್ದು ಇಂದು ಸುಳ್ಯ ತಾಲೂಕಿನಾದ್ಯಂತ ಮನೆ ಮಾತಾಗಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಈಗ 25 ಸಾವಿರ ಸಂಖ್ಯೆಯ ಸದಸ್ಯರನ್ನು ಹೊಂದಿ ಜನಸಾಮಾನ್ಯರ ಬೆನ್ನೆಲುಬಾಗಿ ರಾಜ್ಯಾದ್ಯಂತ ಆವರಿಸಿಕೊಂಡಿದೆ. ಇದೀಗ ಗುತ್ತಿಗಾರಿನಲ್ಲಿ 25 ನೇ ನೂತನ ಶಾಖೆಯ ತೆರೆಯುವಾಗ ಎರಡೂವರೆ ಕೋಟಿ ರೂ. ಡಿಪಾಸಿಟ್ ಬಂದಿರುವಂತಹದು ತುಂಬಾ ಸಂತೋಷವಾಗಿದೆ” ಎಂದು ಹೇಳಿದರು.’

ಉದ್ಘಾಟನೆಯನ್ನು ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ ” ವೆಂಕಟರಮಣ ಸೊಸೈಟಿಯು ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಸೊಸೈಟಿಯ ಆಡಳಿತ ಮಂಡಳಿ , ನಿರ್ದೇಶಕರ , ಸದಸ್ಯರ, ಸಿಬ್ಬಂದಿಗಳ ಸತತ ಪ್ರಯತ್ನದಿಂದ ಅಭಿವೃದ್ಧಿಯತ್ತ ಸಾಗುವಲ್ಲಿ ಯಶಸ್ವಿಯಾಗಿದೆ. ಸಮುದಾಯದ ಏಳಿಗೆಯ ಜೊತೆಗೆ ಜನರ ಸಾಮಾನ್ಯರ ಕಷ್ಟಗಳಿಗೆ ಆರ್ಥಿಕ ನೆರವಾಗಿ ಬೆನ್ನೆಲುಬಾಗಿ ಸಂಘ ನಿಂತಿದ್ದು ಹೆಮ್ಮರವಾಗಿ ಬೆಳೆದುನಿಂತಿದೆ. ಇಂದಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದು ಕೃಷಿಕರಿಗೆ ಸಾಲ ಸೌಲಭ್ಯಗಳನ್ನು ನೀಡಿ ಕೃಷಿಕರ ಬೆನ್ನುಬಾಗಿ ಆರ್ಥಿಕ ನೆರವನ್ನು ನೀಡಿದೆ. ಗುತ್ತಿಗಾರಿನಲ್ಲಿ ಉದ್ಘಾಟನೆಗೊಂಡ ಈ ನೂತನ 25 ನೇ ಶಾಖೆಯು ಅಭಿವೃದ್ಧಿಯತ್ತ ಸಾಗಿ , ಮುಂದಿನ ದಿನಗಳಲ್ಲಿ ರಾಜ್ಯ – ರಾಷ್ಟ್ರದಲ್ಲಿ ಸಹ ಸಂಸ್ಥೆಗಳನ್ನು ಸ್ಪಾಪಿಸಿ ಜನ ಸಾಮಾನ್ಯರಿಗೆ ಸಹಕಾರಿಯಾಗಿ ಬೆಳೆದು ಕೊಡುಗೆಗಳನ್ನು ನೀಡುವಂತಾಗಲಿ” ಎಂದು ಶುಭಹಾರೈಸಿದರು.
ದ. ಕ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ ಮಾತನಾಡಿ ” ಸಂಸ್ಥೆಯನ್ನು ಈ ಮಟ್ಟಕ್ಕೆ ಏರಿಸುವಲ್ಲಿ ಸಂಸ್ಥೆಯ ಆಡಳಿತ ಮಂಡಳಿ , ಸಿಬ್ಬಂದಿಗಳ ಪ್ರಾಮಾಣಿಕ ದುಡಿಮೆಯ
ಪರಿಶ್ರಮವಿದೆ. ಅದರೊಡನೆ ಎಲ್ಲಾ ಸಮುದಾಯದ ಜೊತೆಗೆ ಸಮಾಜ ಮುಖಿ ಕಾರ್ಯವನ್ನು ಮಾಡಿ ಗ್ರಾಹಕರ ಸಹಕಾರದಿಂದ ಬೆಳೆದು ಲಾಭದಾಯಕ ವ್ಯವಹಾರ ನಡೆಸಿ ಸಂಸ್ಥೆಯು ಬೆಳೆದು ನಿಂತಿದೆ” ಎಂದರು.
ವೆಂಕಟರಮಣ ಸೊಸೈಟಿ ಅಧ್ಯಕ್ಷ ಸದಾನಂದ ಕೆ.ಸಿ.ಯವತು ಅಧ್ಯಕ್ಷೀಯ ಮಾತುಗಳನ್ನಾಡಿ ” ಗುತ್ತಿಗಾರಿನಲ್ಲಿ 25 ನೇ ಶಾಖೆ ಆರಂಭವಾಗಿದ್ದರೆ ಸುಳ್ಯ ಜನತೆಯ ಕೊಡುಗೆ ಅಪಾರವಾಗಿದೆ. ಅದರಲ್ಲೂ ಕರ್ನಾಟಕದಾದ್ಯಂತ ಸಂಸ್ಥೆಯ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಅಭಿವೃದ್ಧಿಯತ್ತ ಸಾಗುವುದರ ಜೊತೆಗೆ ಗ್ರಾಹಕರನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಹಾಗೂ ಮುಂದಿನ ದಿನಗಳಲ್ಲಿ ಗ್ರಾಹಕರು ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಸಂಸ್ಥೆಗೆ ಬೆನ್ನೆಲುಬಾಗಿ ನಿಂತು ಸಂಸ್ಥೆಯನ್ನು ರಾಷ್ಟ ಮಟ್ಟದಲ್ಲಿ ಪಸರಿಸಬೇಕು” ಎಂದರು.
ಸೊಸೈಟಿ ಸ್ಥಾಪಕಾಧ್ಯಕ್ಷ ಹಾಗೂ ನಿರ್ದೇಶಕರಾದ ಪಿ.ಸಿ.ಜಯರಾಮ, ಕ್ರೈಸ್ತ ಅಲ್ಪ ಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಲಿಜೋ ಜೋಸ್, ಗುತ್ತಿಗಾರು ಮಹಾಲಕ್ಷ್ಮಿ ಕಾಂಪ್ಲೆಕ್ಸ್ ಮಾಲಕ ನವೀನ್ ಬಾಳುಗೋಡು, ದೇವಿ ಸಿಟಿ ಕಾಂಪ್ಲೆಕ್ಸ್ ಮಾಲಕ ದೇವಿಪ್ರಸಾದ್ ಚಿಕ್ಮುಳಿ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿರ್ದೇಶಕರಾದ ಸದಾನಂದ ಜಾಕೆ, ಎ.ವಿ.ತೀರ್ಥರಾಮ , ಚಂದ್ರಾ ಕೋಲ್ಕಾರ್, ಗಂಗಾಧರ ಪಿ.ಎಸ್. , ಮೋಹನ್ ರಾಂ ಸುಳ್ಳಿ , ಲಕ್ಷ್ಮೀನಾರಾಯಣ ನಡ್ಕ , ಎನ್.ಎಸ್.ದಾಮೋದರ , ಶ್ರೀಮತಿ ನಳಿನಿ ಸೂರಯ್ಯ, ಶ್ರೀಮತಿ ಪ್ರೇಮ ಕೆ.ಎಲ್. , ವೃತ್ತಿಪರ ನಿರ್ದೇಶಕ ಡಾ. ಜ್ಞಾನೇಶ್ ಎನ್.ಎ. , ಮಂಗಳೂರು ಒಕ್ಕಲಿಗ ಸಂಘದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ ,
ಗುತ್ತಿಗಾರು ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಹವ್ಯವಾಣಿ ಯು., ಗಣ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ :
ಅಖಿಲ ಭಾರತ ವಿಶ್ವ ಒಕ್ಕಲಿಗರ ಪರಿಷತ್ ಹಾಗೂ ಕೃಷಪ್ಪ ರಂಗಮ್ಮ ಪ್ರತಿಷ್ಠಾನ ರಿ ಬೆಂಗಳೂರು ಒಕ್ಕಲಿಗ ಸಾಧಕರಿಗೆ ಕೊಡುವ ಪ್ರಶಸ್ತಿಯನ್ನು ಸ್ವೀಕರಿಸಿದ ಒಕ್ಕಲಿಗರ ಆದರ್ಶ ನಾಯಕ ಪ್ರಶಸ್ತಿ ಪಡೆದ ಪಿ.ಸಿ.ಜಯರಾಮ , ಸಮಾಜ ಸೇವಾರತ್ನ ದಿನೇಶ್ ಹಾಲೆಮಜಲು , ಆರೋಗ್ಯ ಸೇವಾ ರತ್ನ ಶ್ರೀಮತಿ ಪುಷ್ಪಾವತಿ ಬುಡ್ಲೆಗುತ್ತು , ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ ದೇವಿಪ್ರಸಾದ್ ಚಿಕ್ಮುಳಿ, ಮಹಿಳಾ ಶಕ್ತಿ ಸಾಧನಾ ಪ್ರಶಸ್ತಿ ಪಡೆದ ಶ್ರೀಮತಿ ಕುಸುಮ ಮುತ್ಲಾಜೆ, ಧಾರ್ಮಿಕ ರತ್ನ ಕಾಳಿಕಾಪ್ರಸಾದ್ ಮುಂಡೋಡಿ ಯವರನ್ನು , ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಪಿ.ಎಸ್.ಗಂಗಾಧರ ಅವರನ್ನು ಗೌರವಿಸಲಾಯಿತು. ಮಹಾಲಕ್ಷ್ಮೀ ಕಟ್ಟಡ ಮಾಲೀಕರಾದ ನವೀನ್ ಬಾಳುಗೋಡು , ಕಟ್ಟಡ ವಿನ್ಯಾಸಕರಾದ ಭಾಸ್ಕರ ಮೇರ್ಕಜೆ ಯವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ ಸ್ವಾಗತಿಸಿ , ನಿರ್ದೇಶಕರಾದ ದೊಡ್ಡಣ್ಣ ಬರೆಮೇಲು ವಂದಿಸಿ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.







