ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವಾನ್ನ,ಚಂಡಿಕಾಹೋಮ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಗಳು ಜರಗಿದ್ದು ಅ.15 ರಂದು ಲಲಿತಾಪಂಚಮಿಯಂದು ಕದಿರು ಕಟ್ಟುವುದು ಮತ್ತು ಕದಿರು ವಿತರಣೆ ಹಾಗೂ ಸಾಮೂಹಿಕ ಚಂಡಿಕಾಹೋಮ ಮತ್ತು ನವಾನ್ನ ಭೋಜನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಯಶಸ್ವಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸದಸ್ಯರುಗಳಾದ ಕೇಶವ ಹೊಸೋಳಿಕೆ, ಪುರುಷೋತ್ತಮ ಬದಿಯಡ್ಕ, ಸನತ್ ಮುಳುಗಾಡು, ಶಿವಪ್ರಸಾದ್ ರುದ್ರಚಾಮುಂಡಿ, ಜಯಾನಂದ ಪಟ್ಟೆ, ಉಷಾ ಮಲ್ಕಜೆ, ಶಶಿಕಲಾ ಎ, ಅರ್ಚಕರಾದ ಪರಮೇಶ್ವರ ಭಟ್, ದೇವಾಲಯದ ಸಿಬ್ಬಂದಿ ರವಿ ವಳಲಂಬೆ, ಭಕ್ತಾದಿಗಳು ಮತ್ತಿತರರು ಸಹಕರಿಸಿದರು.

ಪೋಟೋ: ಪ್ರಕೃತಿ ಸ್ಟುಡಿಯೋ ಗುತ್ತಿಗಾರು