ಚೆಂಬು : ಶ್ರೀ ದುರ್ಗಾದೇವಿ ಸಾನಿಧ್ಯ ಹಳೇಮಂಞಡ್ಕ-ದಬ್ಬಡ್ಕದಲ್ಲಿ ನವರಾತ್ರಿ ಉತ್ಸವ ಮತ್ತು ಭಜನಾ ಸೇವೆ

0

ಚೆಂಬು ಗ್ರಾಮದ ಶ್ರೀ ದುರ್ಗಾದೇವಿ ಸಾನಿಧ್ಯ ಹಳೇಮಂಞಡ್ಕ-ದಬ್ಬಡ್ಕದಲ್ಲಿ ನವರಾತ್ರಿ ಉತ್ಸವ ಮತ್ತು ಭಜನಾ ಸೇವೆಗಳು ನಡೆಯುತ್ತಿದೆ.

ಅ.11ರಿಂದ ಆರಂಭಗೊಂಡ ಕಾರ್ಯಕ್ರಮ ಅ. 20 ರವರೆಗೆ ನವರಾತ್ರಿ ಉತ್ಸವ ಮತ್ತು ಭಜನಾ ಸೇವೆಗಳು ನಡೆಯುತ್ತಿದ್ದು, ಪ್ರತೀ ದಿನ ಸಂಜೆ ಗಂಟೆ 6-30ರಿಂದ ರಾತ್ರಿ ಗಂಟೆ 9-00ರ ತನಕ ನಡೆಯುತ್ತಿದೆ.

ಅ. 11ರಂದು ದೀಪಾರಾಧನೆ, ಭಜನೆ ಪ್ರಾರಂಭ, ಅ.12ರಂದು ಬೆಳಿಗ್ಗೆ ಗಣಪತಿ ಹವನ, ಬೆಳಿಗ್ಗೆ ಶ್ರೀ ದುರ್ಗಾಪೂಜೆ, ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಿತು.
ಅ.20ರಂದು ವಿಶೇಷ ದೀಪಾರಾಧನೆ ಮತ್ತು ಭಜನಾ ಸೇವೆ ನಡೆಯಲಿದೆ. ಗಂಟೆ 9.30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ. ನಂತರ ಅನ್ನ ಸಂತರ್ಪಣೆ ಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.