ನಿಂತಿಕಲ್ಲು: ಸ್ಕಂದ ಗಿರಿ ಹೊಟೇಲ್ ಮಾಲಕ ನವೀಶ್ ಹೃದಯಾಘಾತದಿಂದ ಮೃತ್ಯು

0

ನಿಂತಿಕಲ್ಲಿನ ವೃದ್ಧಿ ಕಾಂಪ್ಲೆಕ್ಸ್ ನಲ್ಲಿ ಸ್ಕಂದಗಿರಿ ಎಂಬ ಹೆಸರಿನ ಹೋಟೆಲ್ ನ್ನು ನಡೆಸುತ್ತಿದ್ದ ಕಾಣಿಯೂರು ಗ್ರಾಮದ ಬಾರೆತ್ತಡಿ ದಿ. ವಾಚಣ್ಣ ಗೌಡರ ಪುತ್ರ ನವೀಶ್ ಎಂಬವರು ಹೃದಯಾಘಾತದಿಂದ ಅ. 16ರಂದು ನಿಧನರಾದರು.


ಇವರು ಹೆಚ್ಚಾಗಿ ಹೋಟೆಲ್ ನಲ್ಲೇ ಮಲಗುತ್ತಿದ್ದರೆನ್ನಲಾಗಿದೆ. ಅ. 16ರಂದು ಬೆಳಿಗ್ಗೆ ಮನೆಯವರು ನವೀಶ್ ರ ಮೊಬೈಲ್ ಗೆ ಕರೆ ಮಾಡಿದಾಗ ಕಾಲ್ ಸ್ವೀಕರಿಸಿದೇ ಇದ್ದಾಗ ಸಹೋದರ ಭರತ್ ಬಂದು ಹೋಟೆಲ್ ನಲ್ಲಿ ನೋಡಿದಾಗ ನವೀಶ್ ರು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು 108 ಅ್ಯಂಬುಲೆನ್ಸ್ ಮೂಲಕ ಸುಳ್ಯಕ್ಕೆ ಕರೆತರುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಭರತ್ ಸುದ್ದಿಗೆ ತಿಳಿಸಿರುತ್ತಾರೆ.
ಮೃತರು ಅವಿವಾಹಿತರಾಗಿದ್ದು, ತಾಯಿ ಪುಷ್ಪಾವತಿ, ಸಹೋದರರಾದ ಪ್ರಶಾಂತ್ ಮತ್ತು ಭರತ್, ಸಹೋದರಿ ವೀಣಾ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.