ಕೊಯಿಕುಳಿ ಶ್ರೀಕೃಷ್ಣ ಮಂದಿರದಲ್ಲಿ ಶ್ರೀ ದುರ್ಗಾಪೂಜೆ

0

ದುಗ್ಗಲಡ್ಕದ ಕೊಯಿಕುಳಿ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಸೇವಾ ಸಮಿತಿ ವತಿಯಿಂದ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾಪೂಜೆ ಅ.18 ರಂದು ನಡೆಯಿತು. ವೆ.ವೆಂಕಟೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಸಹಿತ ದುರ್ಗಾಪೂಜೆ ನಡೆಯಿತು.

ಬೆಳಿಗ್ಗೆ 8 ರಿಂದ ಭಜನೆ, 9.30ರಿಂದ ದುರ್ಗಾಪೂಜೆ ಆರಂಭಗೊಂಡು ಮಧ್ಯಾಹ್ನ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ವಾಹನ ಪೂಜೆಯನ್ನು ನಡೆಸಲಾಯಿತು. ಮಂದಿರದ ಸ್ಥಾಪಕಾಧ್ಯಕ್ಷರಾದ ಎಂ.ಸ್ವಯಂಪ್ರಕಾಶ್ ನೀರಬಿದಿರೆ, ಶ್ರೀಮತಿ ಮಂಜುಳಾ ಸ್ವಯಂಪ್ರಕಾಶ್, ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.