













ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ನಡೆಯುತ್ತಿದೆ.

ಅ. 11 ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಾಂಜಲಿ ಕಲಾ ನಿಕೇತನ ನಿಂತಿಕಲ್ಲು ಶಾಖೆಯ ವಿದ್ಯಾರ್ಥಿ ಗಳಿಂದ ನೃತ್ಯಾರ್ಪಣಂ ಭರತ ನಾಟ್ಯ, ಕೇರ್ಪಡ ಭಜನಾ ಮಂಡಳಿ ಯವರ ಭಜನೆ,ಕಾಣಿಯೂರು ಶ್ರೀ ಲಕ್ಷ್ಮಿ ನರಸಿಂಹ ಭಜನಾ ತಂಡದವರಿಂದ ಕುಣಿತ ಭಜನೆ ನಡೆಯಿತು.ಅ. 12 ರಂದು ನಾವೂರು ಸುಬ್ರಹ್ಮಣ್ಯೇಶ್ವರ ಭಜನಾ ತಂಡದಿಂದ ಭಜನಾ ಕಾರ್ಯ ಕ್ರಮ,, ಬಾಳಿಲ ಮುಪ್ಪೆರ್ಯದ ಶ್ರೀ ಮಹಾ ವಿಷ್ಣು ಮಕ್ಕಳ ಯಕ್ಷಗಾನ ತಂಡ ದವರಿಂದ ತಾರಾವಳಿ ಮದನಾಕ್ಷಿ ಶಿವ ಭಕ್ತ ವೀರಮಣಿ ಎಂಬ ಯಕ್ಷಗಾನ, ಕೆಮ್ಮಲೆ ನಾಗ ಬ್ರಹ್ಮ ಭಜನಾ ಮಂಡಳಿಯವರಿಂದ ಮತ್ತು ಪೆರ್ಲಪಾಡಿ ಷಣ್ಮುಖ ಮಹಿಳಾಭಜನಾ ತಂಡ ದವರಿಂದ ಕುಣಿತ ಭಜನೆ,, ಪುತ್ತೂರು ಕಲಾನಿಕೇತನ ಇನ್ಸ್ಟಿಟ್ಯೂಟ್ ಆಪ್ ಆರ್ಟ್ಸ್ ರವರಿಂದ ನೃತ್ಯ ವೈಭವ, ಅ.13 ರಂದು ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ಶ್ರೀ ವಿಷ್ಣು ಮೂರ್ತಿ ಭಜನಾ ಮಂಡಳಿಯವರಿಂದ ಭಜನೆ,ಅ14 ರಂದು ಶ್ರೀ ಮಹಿಷ ಮರ್ದಿನೀ ಕಲಾ ಸಂಘ ದವರಿಂದ ದಕ್ಷ ಯಜ್ಞ ಯಕ್ಷಗಾನ ತಾಳ ಮದ್ದಳೆ,ಅ. 15 ರಂದು ಕಾಣಿಯೂರು ಶ್ರೀ ಲಕ್ಷ್ಮಿ ನರಸಿಂಹ ಭಜನಾ ಮಂಡಳಿಯವರಿಂದ ಭಜನೆ,, ಬೆಳ್ಳಾರೆ ಯಕ್ಷ ಕಲಾಬೋಧಿನಿ ರವರಿಂದ ಶ್ಯಾಮಂತಕ ಮಣಿ ಎಂಬ ಯಕ್ಷಗಾನ ಬಯಾಲಾಟ ನಡೆಯಿತು.ಅ.16 ರಂದು ಪುಳಿಕುಕ್ಕು ಶ್ರೀ ಗೋಪಾಲ ಕೃಷ್ಣ ನಾಕೂರು ಗಯಾ ಭಜನಾ ಮಂಡಳಿಯವರಿಂದ ನೃತ್ಯ ಭಜನೆ, ಬಳಿಕ ಬೆಳ್ಳಾರೆ ಪಂಜ, ಕೈ ಕಂಬ, ನಿಂತಿಕಲ್ಲು ಡ್ಯಾನ್ಸ್ ಬೀಟ್ಸ್ ಶಾಖೆ ಯ ವಿದ್ಯಾರ್ಥಿ ಗಳಿಂದ ನೃತ್ಯ ಸಂಭ್ರಮ ನಡೆಯಿತು. ಪ್ರತಿ ದಿನ ಸೇವಾ ರಂಗ ಪೂಜೆ, ಮಾಮೂಲು ರಂಗ ಪೂಜೆ ಸರ್ವ ಸೇವಾ ಪೂಜೆ ವಿವಿಧ ಸೇವಾ ಪೂಜೆಗಳು ನಡೆಯುತ್ತಿದೆ.








