














ಉಡುಪಿ ಜಿಲ್ಲೆಯ ಕಾಪುವಿನ
ವಿ ಮೀಡಿಯಾ, K1 ಭ್ರಮರಿ ಹೋಟೆಲ್ ಹಾಗೂ
ನಮಸ್ತೆ ರೆಸಾರ್ಟ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ
ಎಲೈಟ್ ಮಂಗಳೂರು 2026 ಸೀಸನ್ 1 ನಲ್ಲಿ ಮಿಸ್ಸೆಟೀನ್ ವಿಭಾಗದಲ್ಲಿ
ಸಾನಿಧ್ಯ ಡಿ.ವಿ. 2nd ರನ್ನರ್ ಅಪ್ ಪ್ರಶಸ್ತಿಯನ್ನು ಹಾಗೂ ಬೆಸ್ಟ್
ಸ್ಮೈಲ್ ಟೈಟಲ್ ನ್ನು ಪಡೆದುಕೊಂಡಿದ್ದಾರೆ.
ಮಿಸ್ಸೆಟೀನ್, ಮಿಸ್ಸೆಸ್ &
ಮಿಸ್ಟರ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 30
ಮಂದಿ ಭಾಗವಹಿಸಿದ್ದು, 3 ಸುತ್ತುಗಳಲ್ಲಿ ನಡೆದ ಸ್ಪರ್ಧೆಯ
ಅಂತಿಮ ಹಂತಕ್ಕೆ 21 ಸ್ಪರ್ಧಿಗಳು ಆಯ್ಕೆಯಾಗಿದ್ದರು.
ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ 10 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರು,
ಶ್ರೀಮತಿ ದಿವ್ಯ ಎಂ.ಜಿ ಹಾಗೂ ವಿಶ್ವನಾಥ ದೇವರಗುಂಡ ದಂಪತಿಯ ಪುತ್ರಿ.








