ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವಾಹನ ಚಾಲಕರಾಗಿದ್ದು, ನಿವೃತ್ತರಾಗಿದ್ದ ರಾಘವ ನಾಯ್ಕ ಕಕ್ಕೆಬೆಟ್ಟು ರವರು ಅಲ್ಪಕಾಲದ ಅಸೌಖ್ಯದಿಂದ ಅ.15ರಂದು ನಿಧನರಾದರು. ಅವರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು.














ಅಸೌಖ್ಯದಿಂದ ಇವರು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಿವೃತ್ತಿಯ ಬಳಿಕ ಕೃಷಿ ಜೀವನ ನಡೆಸುತ್ತಿದ್ದರು.
ಮೃತರು ಪತ್ನಿ ಪದ್ಮಾವತಿ, ಪುತ್ರ ಪ್ರದೀಪ್ ಕೆ.ಆರ್., ಪುತ್ರಿ ಪ್ರಜ್ಞಾ ಕೆ.ಆರ್. ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.







