ಮಹಿಳಾ ಕಿಸಾನ್ ದಿವಸ್ ಆಚರಣೆ: ಸಂಪಾಜೆಯ ಲೀಲಾವತಿ ರುಕ್ಮಯ ದಾಸ್ ಅವರಿಗೆ ಸನ್ಮಾನ

0


ಮಹಿಳಾ ರೈತರ ಕೃಷಿ ಸಾಧನೆ, ಕೃಷಿ ಕ್ಷೇತ್ರಕ್ಕೆ ಅವರ ಅಮೂಲ್ಯ ಕೊಡುಗೆ ಹಾಗೂ ಮಹಿಳಾ ರೈತರ ಸಬಲೀಕರಣದ ಮಹತ್ವವನ್ನು ಸಾರುವ ಉದ್ದೇಶದಿಂದ ಮಹಿಳಾ ಕಿಸಾನ್ ದಿವಸ್ ಆಚರಣಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕೃಷಿ ಉಪನಿರ್ದೇಶಕರಾದ ಶ್ರೀ ಶಿವಶಂಕರ್ ಗಾನಗೊಂಡರ್ ಹಾಗೂ ವೇದಿಕೆಯಲ್ಲಿನ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಶ್ರೀಮತಿ ಲೀಲಾವತಿ ರುಕ್ಮಯ ದಾಸ್ ಅವರನ್ನು ‘ಸಶಕ್ತ ಮಹಿಳೆ–ಸುಸ್ಥಿರ ಕೃಷಿ’ ಪರಿಕಲ್ಪನೆಯಡಿ ಆತ್ಮ ಯೋಜನೆಯ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪರಿಶ್ರಮ, ಸಾಧನೆ ಹಾಗೂ ಕೊಡುಗೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಗೌರವ ನೀಡಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೃಷಿ ಸಖಿಯರಾದ ಮೋಹಿನಿ ವಿಶ್ವನಾಥ್ (ನಿಶಾ), ವಿಜಯಾ (ಜಾಲ್ಸೂರು), ಲೋಚನಾ (ಆಲೆಟ್ಟಿ), ಪದ್ಮಾವತಿ (ಪೆರುವಾಜೆ) ಸೇರಿದಂತೆ ಮಹಿಳಾ ರೈತರು ಭಾಗವಹಿಸಿದರು.
ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪರಿಶ್ರಮ, ಸಾಧನೆ ಹಾಗೂ ಕೊಡುಗೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಗೌರವ ನೀಡಲಾಯಿತು.
ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುವುದು, ಆಧುನಿಕ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುವುದು, ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಹಾಗೂ ಮಹಿಳಾ ರೈತರ ಸಾಧನೆಗಳಿಗೆ ಪ್ರೋತ್ಸಾಹ ನೀಡುವುದು ಮಹಿಳಾ ಕಿಸಾನ್ ದಿವಸ್ ಆಚರಣೆಯ ಪ್ರಮುಖ ಉದ್ದೇಶಗಳಾಗಿವೆ.
ಗ್ರಾಮೀಣ ಭಾಗದ ಮಹಿಳಾ ರೈತರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಕುಟುಂಬದ ಆರ್ಥಿಕ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಮಹಿಳಾ ರೈತರ ಜ್ಞಾನ, ಅನುಭವ, ಪರಿಶ್ರಮ ಮತ್ತು ಸಾಧನೆಗಳನ್ನು ಗುರುತಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಇತರ ಮಹಿಳೆಯರಿಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ.
ಮಹಿಳಾ ರೈತರ ಸಬಲೀಕರಣದ ಮೂಲಕ ಸುಸ್ಥಿರ ಕೃಷಿ ಅಭಿವೃದ್ಧಿಗೆ ಉತ್ತೇಜನ ನೀಡುವಲ್ಲಿ ಮಹಿಳಾ ಕಿಸಾನ್ ದಿವಸ್ ಮಹತ್ವದ ವೇದಿಕೆಯಾಗಿದೆ.