ಬಾಳಿಲದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ

0

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೇರ್ಯ ಆಶ್ರಯದಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀಶಾರದೋತ್ಸವ ಅ. 19-20ರಂದು ಬಾಳಿಲದಲ್ಲಿ ನಡೆಯಲಿದೆ.


ಅ. 19ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹ ಆಗಮನ ಬಳಿಕ ಸ್ಥಳ ಶುದ್ಧಿ, ಗಣಪತಿ ಹವನ, ಶಾರದಾ ದೇವಿಯ ಪ್ರತಿಷ್ಠಾಪನೆ, ಆಭರಣ
ಧಾರಣೆ ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಪೂರ್ವಾಹ್ನ ಉದ್ಘಾಟನಾ
ಸಮಾರಂಭ ನಡೆಯಿತು.

ಮಧ್ಯಾಹ್ನ ಮಹಿಳೆಯರಿಂದ
ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ,
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಸಂಜೆ ಸೇವಾ ಪುರಸ್ಕಾರ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ರಾತ್ರಿ ಗಂಟೆ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗ ಮಂಗಳೂರು ಇವರಿಂದ ನಾಟಕ ಜೋಡು ಜೀಟಿಗೆ ನಡೆಯಿತು.


ಅ. 20ರಂದು ಬೆಳಿಗ್ಗೆ ಗೀತಾಜ್ಞಾನ ಯಜ್ಞ ಘಟಕ ಬಾಳಿಲ ಇವರಿಂದ ಶ್ರೀಮದ್ ಭಗವದ್ಗೀತೆ ಪಾರಾಯಣ ನಡೆದ ಬಳಿಕ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ರಾವ್ ಯರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಡಾ. ಶ್ಯಾಮ್ ಭಟ್ ಕೆರೆಕ್ಕೋಡಿ ಕಲ್ಮಡ್ಕ ಇವರಿಗೆ ಶ್ರೀ ಶಾರದೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತಿಥಿಗಳಾಗಿ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉದಯಕುಮಾರ್ ರೈ ಶೇಣಿ, ಪುತ್ತೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಸಹಾಯಕ ಸಂಚಾರ ನಿರೀಕ್ಷಕರಾದ ಭಾಸ್ಕರ ಶೆಟ್ಟಿ ಬಜನಿ ಭಾಗವಹಿಸಿದ್ದರು. ವೈದ್ಯಕೀಯ ಕ್ಷೇತ್ರದ ಎಂ.ಎಸ್. ಪದವಿಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಡಾ. ಶರಣ್ಯ ಬಾಳಿಲ ಇವರಿಗೆ ವಿಶೇಷ ಪುರಸ್ಕಾರ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕು. ಛಾಯಾ ಮತ್ತು ಕು. ಪ್ರಾಪ್ತಿಯವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಗೌಡ ಮರೆಂಗಾಲ, ಗೌರವ ಸಲಹೆಗಾರರಾದ ಎ.ಕೆ. ನಾಯ್ಕ್ ಅಮೆಬೈಲು, ಚೊಕ್ಕಾಡಿ, ಅಶೋಕ್ ಶೆಟ್ಟಿ ಅರ್ಚನಾ, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ ರೈ ಎ.ಎಂ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು ವಂದಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಯಶೋಧ ಪೊಸೋಡು ಪ್ರಾರ್ಥಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ರಾಷ್ಟ್ರೀಯ ಯೋಗಪಟು ಹಾರ್ದಿಕಾ ಕೆರೆಕ್ಕೋಡಿ ಇವರಿಂದ ಯೋಗ ಪ್ರದರ್ಶನ ನಡೆಯಲಿದೆ.

ಕ್ರೀಡಾ ಸ್ಪರ್ಧೆಗಳು
ಅ. : 18ರಂದು ಬೆಳಿಗ್ಗೆ 30 ಗಜಗಳ 7 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ, ಅ. 19ರಂದು ಬೆಳಿಗ್ಗೆ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಬೆಳಿಗ್ಗೆಯಿಂದ 7ನೇ ತರಗತಿ ವಿಭಾಗ ಕಬಡ್ಡಿ ಪಂದ್ಯಾಟ, 8ರಿಂದ 10ನೇ ತರಗತಿ ವಿಭಾಗ ಕಬಡ್ಡಿ ಪಂದ್ಯಾಟ, ಅಂಗನವಾಡಿ ಮಕ್ಕಳಿಂದ ಹಿರಿಯ ಪುರುಷ, ಮಹಿಳೆಯರ ತನಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.
ಅಪರಾಹ್ನ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯದ ಕಲಾವಿದರಿಂದ ಚೆಂಡೆ ವಾದನ, ಶೌರ್ಯ ಮಕ್ಕಳ ಕುಣಿತ ಭಜನಾ ತಂಡ ಬಾಳಿಲ – ಮುಪ್ಪೇರ್ಯ ಮತ್ತು ಸ್ನೇಹಾಂಜಲಿ ಮಕ್ಕಳ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ಕುಣಿತ ಭಜನೆ, ನಾದ ಸರಸ್ವತಿ ವಾದ್ಯ ಬಳಗ ಬಾಳುಗೋಡು ಜೊತೆಗೂಡಿ ಕು. ಅಹನಾ ರೈ ಅಗಲ್ಪಾಡಿ ಮತ್ತು ಕು. ಲಕ್ಷ್ಯಶ್ರೀ ನರ್ಲಡ್ಕ ಇವರ ಪುಟ್ಟ ಶಾರದೆಯ ಟ್ಯಾಬ್ಲೊ ಸಹಿತ ಶ್ರೀ ಶಾರದಾದೇವಿಯ ವೈಭವದ ಶೋಭಾಯಾತ್ರೆ ಬಾಳಿಲದಿಂದ ಬೊಮ್ಮಣಮಜಲು ತನಕ ಸಾಗಿ ಗೌರಿಹೊಳೆಯಲ್ಲಿ ಜಲಸ್ತಂಭನ ನಡೆಯಲಿದೆ

ಉದ್ಘಾಟನೆ

ಬೆಳಿಗ್ಗೆ ಶಾರದಾ ದೇವಿಯ ಪ್ರತಿಷ್ಠೆಯ ಬಳಿಕ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಮರೆಂಗಾಲರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಮಿತಿಯ ಗೌರವ ಸಲಹೆಗಾರರಾದ ಬಿ.ಎಸ್.ಎನ್.ಎಲ್ ನಿವೃತ್ತ ಅಧಿಕಾರಿ ಎ.ಕೆ. ನಾಯ್ಕ್ ಅಮೆಬೈಲು ಚೊಕ್ಕಾಡಿ ಶಾರದೋತ್ಸವವನ್ನು ಉದ್ಘಾಟಿಸಿದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರುಗಳಾದ ರವೀಂದ್ರ ರೈ ಟಪ್ಪಾಲುಕಟ್ಟೆ, ಪ್ರಭಾಕರ ಆಳ್ವ ಬಜನಿಗುತ್ತು, ಶ್ರೀಮತಿ ಸರಿತಾ ಕಂಡಿಕಟ್ಟ ಮತ್ತು ಮಂಗಳೂರು ಕ್ಯಾಂಪ್ಕೋ ನಿರ್ದೇಶಕಿ ಶ್ರೀಮತಿ ಮಾಲಿನಿ ಪ್ರಸಾದ್ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ರಾವ್ ಯು, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ ಅರ್ಚನಾ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಜಾಹ್ನವಿ ಕಾಂಚೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶ್ರೀಮತಿ ಶೋಭ ಎ.ಕೆ. ನಾಯ್ಕ್ ಅಮೆಬೈಲು, ಚೊಕ್ಕಾಡಿ ಪ್ರಾರ್ಥಿಸಿದರು. ಶ್ರೀಮತಿ ರಂಜಿತಾ ಎಸ್. ರೈ ಸ್ವಾಗತಿಸಿ, ಶ್ರೀಮತಿ ಪುಷ್ಪಾವತಿ ವಂದಿಸಿದರು. ಶ್ರೀಮತಿ ಕಮಲ ಕಾರ್ಯಕ್ರಮ ನಿರೂಪಿಸಿದರು.