ಸುಳ್ಯ ಬಂಟರ ಯಾನೆ ನಾಡವರ ಸಂಘದದಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ನ. 20 ಕೊನೆಯದಿನ

0

ಸುಳ್ಯ ಬಂಟರ ಯಾನೆ ನಾಡವರ ಸಂಘದದಿಂದ 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಡಿ. 20ರಂದು ನಡೆಯಲಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಅರ್ಜಿ ಸಲ್ಲಿಸಲು ನ. 20 ಕೊನೆಯದಿನವಾಗಿದೆ.
2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 85 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಸ್ವಜಾತಿಯ ವಿದ್ಯಾರ್ಥಿಗಳು ಅಂಕಪಟ್ಟಿಯ ಜೆರಾಕ್ಸ್ ಪ್ರತಿಯೊಂದಿಗೆ (ಬಿಪಿಲ್ ಪಡಿತರ ಚೀಟಿ ಹೊಂದಿದವರಿಗೆ ಅಂಕಗಳ ಪರಿಗಣನೆ ಇರುವುದಿಲ್ಲ ) ತಮ್ಮ ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಸ್ವವಿಳಾಸದ ವಿವರವನ್ನು ತಮ್ಮ ತಮ್ಮ ವಲಯ ಅಧ್ಯಕ್ಷರಲ್ಲಿ ಅಥವಾ ಕಚೇರಿ ಕಾರ್ಯದರ್ಶಿ- ಕುಸುಮಾಧರ ರೈ (9343243257)ಯವರಲ್ಲಿ ನೀಡುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.