













ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆಯುಧಪೂಜೆ ಅ.20 ರಂದು ನಡೆಯಿತು.

ಇಲಾಖೆಯ ಮತ್ತು ಸಿಬ್ಬಂದಿಗಳ ಎಲ್ಲಾ ವಾಹನಗಳಿಗೆ ,ಠಾಣಾ ಆಯುಧಗಳಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಬೆಳ್ಳಾರೆ ಪೊಲೀಸ್ ಠಾಣೆ ಉಪನೀರಿಕ್ಷಕರಾದ ಈರಯ್ಯ ದೂಂತೂರು,ಎ.ಎಸ್.ಐ.ಗಳು ಬೆಳ್ಳಾರೆ ಪೊಲೀಸ್ ಠಾಣೆ ಸಿಬ್ಬಂದಿಗಳು ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.








