ಸುಬ್ರಹ್ಮಣ್ಯದಲ್ಲಿ ಜಿಲ್ಲಾಮಟ್ಟದ ನೆಟ್ ಬಾಲ್ ಪಂದ್ಯಾಟ

0

ಎಡಪದವು, ಮೂಡಬಿದಿರೆ ಕಾಲೇಜಿಗೆ ಬಹುಮಾನ

ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ದ.ಕ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಮತ್ತು ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಪದವಿಪೂರ್ವ ವಿಭಾಗದ ಬಾಲಕ- ಬಾಲಕರ ಜಿಲ್ಲಾ ಮಟ್ಟದ ನೆಟ್ ಬಾಲ್ ಪಂದ್ಯಾಟವು ಅ.19 ರಂದು ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ, ದ.ಕ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಚಿದ್ಗಲ್, ಕಾರ್ಯದರ್ಶಿ ನವೀನ್ ಹೆಗಡೆ, ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗುಣವರ್ಧನ ಕೆದಿಲ, ಸದಸ್ಯ ರಾಮಕೃಷ್ಣ ಹೊಳ್ಳಾರು ವೇದಿಕೆಯಲ್ಲಿದ್ದರು.ಉಪನ್ಯಾಸಕಿ ಶ್ರುತಿ ಅಶ್ವಥ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಕ್ರೀಡಾಂಗಣ ಉದ್ಘಾಟಿಸಲಾಯಿತು. ನಂತರ ಪಂದ್ಯಾಟಗಳು ಆರಂಭವಾದವು.

ಫಲಿತಾಂಶ

ನೆಟ್ ಬಾಲ್ ನಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು, ಹಾಗೂ ಎರಡೂ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಜೈನ್ ಪದವಿ ಪೂರ್ವ ಕಾಲೇಜು ಮೂಡಬಿದಿರೆ ಪಡೆಯಿತು. ಎಸ್.ಎಸ್.ಪಿ.ಯು ಕಾಲೇಜಿನ ಕೌಶಿಕ್ , ಮನ್ವಿತ್, ವೇದಿಕಾ, ಚೈತನ್ಯ ಇವರುಗಳು ಅ.27 ಮತ್ತು 28 ರಂದು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.